ಜೂನ್ 8ರಂದು ಜನಾಂದೋಲನಗಳ ಜೀವಾಳ ‘ಸ್ವಾಮಿ ದೊರೆ’ ಶ್ರದ್ಧಾಂಜಲಿ ಕಾರ್ಯಕ್ರಮ

Prasthutha|

ಇತ್ತೀಚೆಗೆ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಅವರ ಸ್ಮರಣಾರ್ಥ ಜನಾಂದೋಲನಗಳ ಜೀವಾಳ ‘ಸ್ವಾಮಿ ದೊರೆ’ಶ್ರದ್ಧಾಂಜಲಿ ಹಾಗೂ ಸಂಕಲ್ಪ ದಿನವನ್ನು  ಜೂನ್ 8ರಂದು ಮಂಗಳವಾರ ಸಂಜೆ 4ರಿಂದ 7 ಗಂಟೆವರೆಗೆ ಆನ್ ಲೈನ್ ನಲ್ಲಿ ಆಯೋಜಿಸಲಾಗಿದೆ.

- Advertisement -

ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಶಾಸಕ ಎ.ಟಿ.ರಾಮಸ್ವಾಮಿ ಉದ್ಘಾಟಿಸಲಿದ್ದಾರೆ. ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಭಾಗವಹಿಸಲಿದ್ದಾರೆ. ದೊರೆಸ್ವಾಮಿಯವರ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಕುರಿತು ಕವಿ, ಬರಹಗಾರ ಬಂಜಗೆರೆ ಜಯಪ್ರಕಾಶ್, ಬಿಎಂಐಸಿ ವಿರೋಧಿ ಹೋರಾಟದ ಕುರಿತು ಹಿರಿಯ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹ ಮೂರ್ತಿ,  ಭ್ರಷ್ಟಾಚಾರ ವಿರೋಧಿ ಹೋರಾಟದ ಕುರಿತು ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ ಮಾತನಾಡಲಿದ್ದಾರೆ.

ಭೂ ಕಬಳಿಕೆ ವಿರೋಧಿ ಹೋರಾಟದ ಕುರಿತು ಕರ್ನಾಟಕ ರಾಷ್ಟ್ರ ಸಮಿತಿಯ ರವಿ ಕೃಷ್ಣಾ ರೆಡ್ಡಿ,  ಮಂಡೂರು ತ್ಯಾಜ್ಯ ವಿರೋಧಿ ಹೋರಾಟದ ಕುರಿತು ಮಂಡೂರು ಗೋಪಾಲ ರಾವ್ ಹಾಗೂ ಮದ್ಯ ನಿಷೇಧ ಹೋರಾಟದ ಕುರಿತು ಮ.ನಿ.ಹೋರಾಟ ಸಮಿತಿಯ ವಿದ್ಯಾ ಪಾಟೀಲ ಮಾತನಾಡಲಿದ್ದಾರೆ.

- Advertisement -

ರೈತಾಂದೋಲನದ ಕುರಿತು KRRSನ ಬಡಗಲಪುರ ನಾಗೇಂದ್ರ, ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಕ ಕುರಿತು ಸಿರಿಮನೆ ನಾಗರಾಜ್, ಡಿ.ಎಚ್. ಪೂಜಾರ್ ಮಾತನಾಡಲಿದ್ದಾರೆ. ಅದೇ ರೀತಿ ದಿಡ್ಡಳ್ಳಿ ಹೋರಾಟದ ಕುರಿತು ಡಿ.ಎಸ್.ನಿರ್ವಾಣಪ್ಪ ಹಾಗೂ ಅಮೀನ್ ಮೊಹಿಸಿನ್,  ಸಿಎಎ ವಿರೋಧಿ ಹೋರಾಟದ ಕುರಿತು ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸಂಚಾಲಕ ಯೂಸುಫ್ ಮತ್ತು  ಸರ್ವಾಧಿಕಾರ ವಿರೋಧಿ ಹೋರಾಟದ ಕುರಿತು ಪ್ರೊ. ವಿ.ಎಸ್. ಶ್ರೀಧರ್ ಮಾತನಾಡಲಿದ್ದಾರೆ. ಗಾಂಧಿ ಭವನದ ಕಾರ್ಯದರ್ಶಿ  ಇಂದಿರಾ ಕೃಷ್ಣಪ್ಪ ಸಮಾರೋಪದ ಮಾತುಗಳಾಗಲಿದ್ದಾರೆ.ಕಾವೇರಿ ಮತ್ತು ಕುಮಾರ್ ಸಮತಳ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.



Join Whatsapp