ಭಾರತ ಹೊತ್ತಿ ಉರಿಯಲು ನೂಪುರ್ ಶರ್ಮಾ ಹೇಳಿಕೆ ಕಾರಣ, ದೇಶದ ಮುಂದೆ ಕ್ಷಮೆಯಾಚಿಸಬೇಕು: ಸುಪ್ರೀಂ ಕೋರ್ಟ್

Prasthutha|

►ನೂಪುರ್ ಶರ್ಮಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆ

- Advertisement -

►ಪ್ರವಾದಿ ನಿಂದನೆ ಹೇಳಿಕೆ  ಆಕೆಯ ದುರಹಂಕಾರವನ್ನು ತೋರಿಸುತ್ತೆ

ಹೊಸದಿಲ್ಲಿ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಧರ್ಮನಿಂದನೆಯ ಹೇಳಿಕೆಯನ್ನುಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೂಪುರ್ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

- Advertisement -

ಕಾನೂನು ಬಾಹಿರ ಹೇಳಿಕೆ ನೀಡುವ ಮೂಲಕ ನೂಪುರ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆ.ದೂರದರ್ಶನದ ಚರ್ಚೆಗಳಲ್ಲಿ ಇಂತಹ ಕಾನೂನುಬಾಹಿರ ಹೇಳಿಕೆಗಳನ್ನು ನೀಡಲು ಹೇಗೆ ಸಾಧ್ಯವಾಯಿತು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾದ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ನೂಪುರ್ ಹೇಳಿಕೆ ನೀಡಿದ ಕೂಡಲೇ ಕ್ಷಮೆಯಾಚಿಸಬೇಕಿತ್ತು. ಆದರೆ ಅದು ತುಂಬಾ ತಡವಾದ ಕಾರಣ ದೇಶದಲ್ಲಿ ಇತರ ಕ್ರಾಂತಿಕಾರಿ ಘಟನೆಗಳು ಉಂಟಾದವು. ಅಂತರರಾಷ್ಟ್ರೀಯ ಮಟ್ಟದಲ್ಲಿಯೇ, ದೇಶದ ವರ್ಚಸ್ಸಿಗೆ ಮಸಿ ಬಳಿಯಲಾಗಿದೆ.

ನೂಪುರ್ ಶರ್ಮಾ ಅವರ ಪ್ರಕರಣದ ಬಗ್ಗೆ ಪೊಲೀಸ್ ತನಿಖೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ನೂಪುರ್ ಶರ್ಮಾ ರೆಡ್ ಕಾರ್ಪೆಟ್ ಪಡೆಯುತ್ತಿದ್ದಾರೆ. ಬಂಧನಗಳ ಅನುಪಸ್ಥಿತಿಯು ಅವರ ಪ್ರಭಾವವನ್ನು ತೋರಿಸುತ್ತದೆ ಎಂದು ತಿಳಿಸಿದೆ.



Join Whatsapp