ರೇಬಿಸ್ ಚುಚ್ಚುಮದ್ದು ವಿಫಲ: ನಾಯಿ ಕಡಿತಕ್ಕೊಳಗಾದ ವಿದ್ಯಾರ್ಥಿನಿ ಸಾವು

Prasthutha|

ಪಾಲಕ್ಕಾಡ್: ವಿದ್ಯಾರ್ಥಿನಿಯೊಬ್ಬರಿಗೆ ನಾಯಿ ಕಚ್ಚಿದ್ದು, ವೈದ್ಯರು ಸೂಚಿಸಿದ ಎಲ್ಲಾ ಅಗತ್ಯ ಲಸಿಕೆಗಳನ್ನು ತೆಗೆದುಕೊಂಡ ಬಳಿಕವೂ ಆಕೆ ರೇಬಿಸ್ ಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

- Advertisement -

ಶ್ರೀಲಕ್ಷ್ಮೀ (19) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ಶ್ರೀಲಕ್ಷ್ಮಿ ಮೇ 30 ರಂದು ಕಾಲೇಜಿಗೆ ಹೋಗುತ್ತಿದ್ದಾಗ ನಾಯಿಯೊಂದು ಆಕೆಯನ್ನು ಕಚ್ಚಿದೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಆಕೆ ವೈದ್ಯರು ಸೂಚಿಸಿದ ಎಲ್ಲಾ ಅಗತ್ಯ ಲಸಿಕೆಗಳನ್ನು ತೆಗೆದುಕೊಂಡಿದ್ದಾಳೆ. ಕೆಲವು ದಿನಗಳ ವರೆಗೆ ಆರೋಗ್ಯವಾಗಿಯೇ ಇದ್ದ ಶ್ರೀಲಕ್ಷ್ಮಿಗೆ ಇತ್ತೀಚೆಗೆ ರೇಬಿಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ತೀವ್ರ ಜ್ವರದಿಂದ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಶ್ರೀಲಕ್ಷ್ಮಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.

Join Whatsapp