ಪ್ರವಾದಿ ನಿಂದನೆ ವಿವಾದ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನೂಪುರ್ ಶರ್ಮಾ

Prasthutha|

ನವದೆಹಲಿ: ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಪ್ರವಾದಿ ಮುಹಮ್ಮದ್ ರ ನಿಂದನೆ ಮಾಡಿದ ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಪುನರುಜ್ಜೀವಗೊಳಿಸಲು ಮತ್ತು ಪ್ರತಿಕೂಲ ಹೇಳಿಕೆಗಳನ್ನು ತೆಗೆದುಹಾಕುವಂತೆ ಕೋರಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

- Advertisement -

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪಾರ್ಡಿವಾಲಾ ಅವರ ರಜಾಕಾಲದ ಪೀಠವು ಅವರ ಹೇಳಿಕೆಗಳ ಬಗ್ಗೆ ಹಲವಾರು ರಾಜ್ಯಗಳಲ್ಲಿ ದಾಖಲಾದ ಎಫ್ಐಆರ್ ಗಳನ್ನು ಒಟ್ಟುಗೂಡಿಸುವಂತೆ ಕೋರಿ ಜುಲೈ 1 ರಂದು ಶರ್ಮಾ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತ್ತು.

ಪ್ರವಾದಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು, ಮತ್ತು ನೂಪುರ್ ಶರ್ಮಾಳ  ಸಡಿಲವಾದ ನಾಲಿಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಖಾರವಾಗಿ ಹೇಳಿದ್ದು, ಶರ್ಮಾಳ ಹೇಳಿಕೆಯಿಂದ ದೇಶದಲ್ಲಿ ನಡೆದ ಮತ್ತು ನಡೆಯುತ್ತಿರರುವ ಅನಾಹುತಕ್ಕೆಲ್ಲಾ ಆಕೆಯೇ ಕಾರಣ  ಎಂದು ಒತ್ತಿ ಹೇಳಿತ್ತು.

- Advertisement -

ಜವಾಬ್ದಾರಿಯುತ ಸ್ಥಾನದಲ್ಲಿ ಕೂತುಕೊಂಡು ಟಿವಿಯಲ್ಲಿ ಎಲ್ಲಾ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾಳೆ ಮತ್ತು ಇಡೀ ದೇಶವನ್ನು ಬೆಂಕಿಗೆ ಆಹುತಿಗೊಳಿಸಿದ್ದಾಳೆ. ಆದರೂ, ಅವಳು 10 ವರ್ಷಗಳ ವಕೀಲೆ ಎಂದು ಹೇಳಿಕೊಳ್ಳುತ್ತಾಳೆ. ಇಡೀ ದೇಶಕ್ಕೆ ನೀಡಿದ ಹೇಳಿಕೆಗೆ ಅವರು ತಕ್ಷಣವೇ ಕ್ಷಮೆಯಾಚಿಸಬೇಕಿತ್ತು  ಎಂದು ನ್ಯಾಯಾಲಯ ಹೇಳಿದೆ.

Join Whatsapp