ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಮಂಗಳೂರಿನಲ್ಲಿ NSUI ಯಿಂದ ಪ್ರತಿಭಟನೆ

Prasthutha|

ಮಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ NSUI ಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕ್ಲಾಕ್ ಟವರ್ ಟವರ್ ಮುಂಭಾಗದಲ್ಲಿ  ರಸ್ತೆ ತಡೆಯುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾತನಾಡಿದ NSUI ರಾಜ್ಯ ಕಾರ್ಯದರ್ಶಿ ಸುಹಾನ್ ಆಳ್ವಾ ಆರೋಪಿಗಳನ್ನು ಶ್ರೀಘ್ರ ಬಂಧಿಸಿ ಗಲ್ಲಿಗೇರಿಸಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ. ದೇಶದಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲಂದಂತಾಗಿದೆ. ಇಂತಹ ಘಟನೆಯಿಂದ ದೇಶ ತಲೆತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದರು.

- Advertisement -