ತಬ್ಲೀಘಿ ಕೊರೊನಾ ಎಂದು ಅವಹೇಳನ | ಇಂದು ರಾತ್ರಿ ಕ್ಷಮೆ ಕೇಳಲಿರುವ ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ

Prasthutha|

ದೇಶದಲ್ಲಿ ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಸೋಂಕು ಹರಡಲು ತಬ್ಲೀಘಿಗಳೇ ಕಾರಣ ಎಂದು ಮುಸ್ಲಿಮರನ್ನು ಗುರಿಯಾಗಿಸಿ ಮಾಡಿದ್ದ ಕಾರ್ಯಕ್ರಮವನ್ನು ‘ನ್ಯೂಸ್‌ 18 ಕನ್ನಡ’ ಚಾನೆಲ್‌, ಇಂದು ರಾತ್ರಿ 8:30-9:15 ರ ಒಳಗಾಗಿ ತನ್ನ ತಪ್ಪು ವರದಿಗಾಗಿ ಕ್ಷಮೆಯಾಚಿಸಲಿದೆ.

- Advertisement -

2020 ರ ಕೊರೊನಾ ಸಾಂಕ್ರಮಿಕ ಸಮಯದಲ್ಲಿ ತಬ್ಲೀಘಿ ಜಮಾತ್‌ ಅನ್ನು ಗುರಿಯಾಗಿಸಿ ಕೊಂಡಿದ್ದಕ್ಕೆ ಕನ್ನಡ ಚಾನೆಲ್‌ಗಳಾದ ‘ನ್ಯೂಸ್‌ 18 ಕನ್ನಡ’ ಮತ್ತು ‘ಸುವರ್ಣ ನ್ಯೂಸ್‌’ಗೆ, ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿದೆ. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿದೆ.

ದೂರಿನ ವಿಚಾರಣೆ ನಡೆಸಿದ NBSA ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು, ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿ ಹೆಚ್ಚು ಆಕ್ಷೇಪಾರ್ಹವಾಗಿತ್ತು. ಸುದ್ದಿ ವರದಿಯು ಶುದ್ಧ ಊಹಾಪೋಹವನ್ನು ಆಧರಿಸಿತ್ತು. ಕಾರ್ಯಕ್ರಮದ ಧ್ವನಿ, ವಸ್ತು, ಭಾಷೆ ಒರಟಾಗಿದ್ದು, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು ” ಎಂದು ಹೇಳಿದ್ದರು.
ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್‌ 18 ಕನ್ನಡಕ್ಕೆ NBSA 1 ಲಕ್ಷ ದಂಡ ವಿಧಿಸಿದೆ. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್‌ಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ವೆಬ್ ಪೋರ್ಟಲ್‌ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಪ್ರಾಧಿಕಾರವು ಚಾನೆಲ್‌ ಅನ್ನು ಕೇಳಿದೆ. ಅದರಂತೆ ಚಾನೆಲ್‌ ಇಂದು ರಾತ್ರಿ ಕ್ಷಮೆ ಕೇಳಲಿದೆ.



Join Whatsapp