ಒಪಿಎಸ್ ಜಾರಿಗೆ ಒತ್ತಾಯಿಸಿ 11ನೇ ದಿನಕ್ಕೆ ಕಾಲಿಟ್ಟ ಎನ್’ಪಿಎಸ್ ನೌಕರರ ಅಹೋ ರಾತ್ರಿ ಧರಣಿ

Prasthutha|


►ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಧರಣಿ ಸ್ಥಳಕ್ಕೆ ಭೇಟಿ

- Advertisement -


ಬೆಂಗಳೂರು: ಒಪಿಎಸ್ ಪಿಂಚಣಿಯನ್ನು ಜಾರಿಗೊಳಿಸಬೇಕೆಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋ ರಾತ್ರಿ ಧರಣಿ ಕೈಗೊಂಡಿರುವ ಎನ್ ಪಿ ಎಸ್ ನೌಕರರ ಸಂಘದ ಪ್ರತಿಭಟನೆ ಹನ್ನೊಂದನೇ ದಿನಕ್ಕೆ ಕಾಲಿರಿಸಿದ್ದು ಇಂದು ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ನೌಕರರು ಭಾಗವಹಿಸಿದ್ದರು.


ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಂ ಮಾತನಾಡಿ, ಈಗಾಗಲೇ ಎನ್ ಪಿ ಎಸ್ ಕೈಗೊಂಡಿರುವ ಧರಣಿ ಹನ್ನೊಂದನೆ ದಿನಕ್ಕೆ ಕಾಲಿರಿಸಿದೆ. ಕಲಾಪದಲ್ಲಿ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರದ ಯಾವ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸುವ ಬದಲು ರಾಜ್ಯ ಸರ್ಕಾರದಿಂದ ಸದನದ ಮೂಲಕವೇ ಸೂಕ್ತ ಉತ್ತರ ನೀಡಿದರೆ ಒಳಿತು ನಮ್ಮ ಉದ್ದೇಶವಾಗಿತ್ತು. ಕಾದು ನೋಡಬೇಕಿದೆ ಎಂದು ತಿಳಿಸಿದರು.

- Advertisement -


ಪ್ರತಿಭಟನೆಯಲ್ಲಿ ಕ್ರಾಂತಿ ಗೀತೆಗಳ ಮೂಲಕ ಹೋರಾಟದಲ್ಲಿ ಭಾಗವಹಿಸಿರುವ ಧರಣಿ ನಿರತ ಹೋರಾಟಗಾರರನ್ನು ಹುರಿದುಂಬಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ನೌಕರರಿಗೆ ಯಾವುದೇ ತೊಂದರೆಯಾಗದಂತೆ ಊಟದ ವ್ಯವಸ್ಥೆ ಮಾಡಲಾಗಿದೆ.
ಧರಣಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಶ್ರೀ ಕಂಠೇ ಗೌಡ ಮತ್ತಿತರರು ಹಾಜರಿದ್ದರು.



Join Whatsapp