ವಿದ್ಯಾರ್ಥಿಗಳಿಗೆ ಕೋರ್ಸ್ ಮಾರಾಟ:  NCPCR ನಿಂದ BYJU’s ಸಿಇಒ ಬೈಜು ರವೀಂದ್ರನ್ ಗೆ ಸಮನ್ಸ್

Prasthutha|

ನವದೆಹಲಿ: ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟಪ್ ಕಂಪನಿ ‘ಬೈಜೂಸ್‘ನ ಸಿಒಒ ಬೈಜೂ ರವೀಂದ್ರನ್ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್ ಸಿಪಿಸಿಆರ್ ) ಸಮನ್ಸ್ ಜಾರಿ ಮಾಡಿದೆ.

- Advertisement -

ಕೋರ್ಸ್’ಗಳನ್ನು ಖರೀದಿ ಮಾಡಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬೈಜೂಸ್ ಆಮಿಷ ಒಡ್ಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಗ್ರಾಹಕರ ಹಕ್ಕು ರಕ್ಷಣಾ ವೆಬ್ ಸೈಟ್ ಗಳಲ್ಲಿ ಕೇಳಿ ಬಂದ ದೂರುಗಳ ಹಿನ್ನಲೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಬೈಜೂ ರವೀಂದ್ರನ್ ಅವರಿಗೆ ಸಮನ್ಸ್ ನೀಡಿದೆ.

- Advertisement -

 ನಮ್ಮ ವಿರುದ್ಧ ದಬ್ಬಾಳಿಕೆ ಮಾಡಿ ಹಣ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಲವು ಪೋಷಕರು ದೂರು ನೀಡಿದ್ದರು.

ಪೋಷಕರು ಹಾಗೂ ಮಕ್ಕಳಿಗೆ ಆಮಿಷ ಒಡ್ಡಿ, ಸಾಲ ಒಪ್ಪಂದಗಳ ಮೂಲಕ ಮಕ್ಕಳ ಕಲ್ಯಾಣಕ್ಕೆ ತಡೆ ಉಂಟಾಗಿರುವುದು ನಮ್ಮ ಗಮನಕ್ಕೆ ಬಂದಿದ್ದರಿಂದ  ರವೀಂದ್ರನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಹೇಳಿದೆ.

ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಆಯೋಗವು ಕಂಪನಿಗೆ ಸೂಚನೆ ನೀಡಿದ್ದು, ಮಕ್ಕಳಿಗೆ ಬೈಜೂಸ್ ಒದಗಿಸುತ್ತಿರುವ ಕೋರ್ಸ್, ಪಠ್ಯ ರಚನೆ, ಶುಲ್ಕ, ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ, ಕಂಪನಿಯ ಹಣ ಮಾರುಪಾವತಿ ನೀತಿ, ಎಜು–ಟೆಕ್ ಕಂಪನಿಯಾಗಿ ನೋಂದಣಿಯಾಗಿರುವುದರ ಬಗ್ಗೆ ದಾಖಲೆಯನ್ನೂ ನೀಡಿ ಎಂದು ಬೈಜೂಸ್’ಗೆ ಆಯೋಗ ಸೂಚಿಸಿದೆ.

Join Whatsapp