ಹಿಜಾಬ್ ಚರ್ಚೆಗೆ ವಿರೋಧಿಗಳು ನಾಮಧಾರಿ ರಾಜಕಾರಣಿಗಳನ್ನು ಬಳಸುತ್ತಿದ್ದಾರೆ: ಖ್ಯಾತ ಧಾರ್ಮಿಕ ಪಂಡಿತ ಖಲೀಲ್ ಹುದವಿ

Prasthutha|

ಮಂಗಳೂರು: ಕರ್ನಾಟಕದಲ್ಲಿ ಸದ್ಯ ಚರ್ಚೆಯಾಗುತ್ತಿರುವ ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ಖ್ಯಾತ ಅಂತಾರಾಷ್ಟ್ರೀಯ ಧಾರ್ಮಿಕ ಮತ ಪಂಡಿತ ಖಲೀಲ್ ಹುದವಿ ಮಾರ್ಮಿಕವಾಗಿ ಚಾಟಿ ಬೀಸಿದ್ದಾರೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆಯ ಮುಹ್ಯುದ್ದೀನ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಖಲೀಲ್ ಹುದವಿ ಮಾತನಾಡುತ್ತಾ, ಇಂದು ಹಿಜಾಬ್ ಚರ್ಚೆಯಲ್ಲಿ  ಹಿಜಾಬನ್ನು ವಿರೋಧಿಸುವವರು ಉದಾಹರಣೆಯಾಗಿ ತೋರಿಸುವುದು ಮುಸ್ಲಿಮ್ ನಾಮಧಾರಿಗಳನ್ನಾಗಿದೆ. ಅವರಿಗೂ ನೈಜ ಇಸ್ಲಾಮಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಹೇಳಿದ್ದಾರೆ.      

ಇಸ್ಲಾಮಿನ ಯಾವುದಾದರೊಂದು ಆಚಾರಗಳ ಕುರಿತು ಸಮಸ್ಯೆಗಳು ಸೃಷ್ಟಿಯಾದಾಗ ಅದರ ಪರವಹಿಸಿ ಮುಸ್ಲಿಮರು ಮಾತನಾಡುವಾಗ,  ವಿರೋಧಿಗಳು ಬಳಸುವುದು ಮುಸ್ಲಿಮ್ ನಾಮಧಾರಿಗಳಾದ ಶಾಸಕರು ಮತ್ತು ಸಂಸದರನ್ನಾಗಿದೆ. ಮಾಧ್ಯಮಗಳು ಮತ್ತು ಚಾನೆಲ್ ಚರ್ಚೆಗಳಲ್ಲಿ ಇಂತಹವರನ್ನೇ ತೋರಿಸಿ ಅವರೇ ಇಸ್ಲಾಮಿನ ನೈಜ ವಾರಸುದಾರರು ಎಂಬಂತೆ ಬಿಂಬಿಸುತ್ತಾರೆ. ನಿಜವಾಗಿಯೂ ಇಂತಹವರಿಗೆ ಇಸ್ಲಾಮಿನೊಂದಿಗೆ ನೈಜ ಸಂಬಂಧವಿರುವುದಿಲ್ಲ. ಅವರು ಕೇವಲ ಹೆಸರಲ್ಲಿ ಮಾತ್ರ ಮುಸ್ಲಿಮ್ ಆಗಿ ಗುರುತಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

- Advertisement -

ಇಂತಹ ಮನೋಸ್ಥಿತಿಯವರು ಹಿಜಾಬ್ ಕುರಿತು ಕೂಡಾ ಜನರ ದಾರಿ ತಪ್ಪಿಸುತ್ತಾರೆ. ಯಾಕಾಗಿ ಹಿಜಾಬ್ ಧರಿಸಬೇಕು,  ಹಿಜಾಬ್ ಧರಿಸದೇ ಇರಬಾರದೇ ಎಂದು ಪ್ರಶ್ನಿಸುತ್ತಾರೆ. ಇದು ಹಿಜಾಬ್ ಪರ ಹೋರಾಟಗಳನ್ನು ದಾರಿ ತಪ್ಪಿಸುತ್ತದೆ ಎಂಬ ಧಾಟಿಯಲ್ಲಿ ಖಲೀಲ್ ಹುದವಿ ಮಾತನಾಡಿದ್ದಾರೆ.

Join Whatsapp