ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ನಿಜವಾದ ಮೂರ್ಖ: ಸಂಸದ ಪ್ರತಾಪ್ ಸಿಂಹ

Prasthutha|

ಮೈಸೂರು: ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ನಿಜವಾದ ಮೂರ್ಖ. ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸೋಮವಾರ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತಾ ಗೊತ್ತಿಲ್ವಾ?. ನಿಜವಾದ ಮೂರ್ಖತನ ಪ್ರದರ್ಶನ ಮಾಡುತ್ತಿರುವುದು ಖಾದರ್ ಎಂದು ಗುಡುಗಿದರು.

‘ಕೋರ್ಟ್ ತೀರ್ಪು ಬರುವವರೆಗೆ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ಇಂದು ಹಿಜಾಬ್ ಕೇಳಿದ್ದಾರೆ, ನಾಳೆ ಬುರ್ಖಾ ಹಾಕಿಕೊಂಡು ಬರುತ್ತಾರೆ. ಶುಕ್ರವಾರ ಬಂದರೆ ಶಾಲೆಯಲ್ಲಿಯೇ ನಮಾಜ್ ಮಾಡುತ್ತೇವೆ ಎನ್ನುತ್ತಾರೆ. ಮುಂದೊಂದು ದಿನ ಕ್ಲಾಸ್ ರೂಂನಲ್ಲೇ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಎಂದು ಕೇಳುತ್ತಾರೆ. ಹಾಗೇನೇ, ದೇಶವನ್ನೇ ತುಂಡು ಮಾಡಿ ಎನ್ನುತ್ತಾರೆ ಎಂದು ಹೇಳಿದ್ದಾರೆ.

Join Whatsapp