ಆರೆಸ್ಸೆಸ್ಸ್ ನಲ್ಲಿರುವ ಎಲ್ಲರೂ ಕೆಟ್ಟವರಲ್ಲ ಎಂದ ಮಮತಾ ಬ್ಯಾನರ್ಜಿ: ಪ್ರತಿಪಕ್ಷಗಳ ವ್ಯಾಪಕ ಆಕ್ರೋಶ

Prasthutha|

ಕೋಲ್ಕತ್ತಾ: ಆರೆಸ್ಸೆಸ್ಸ್ ನಲ್ಲಿರುವ ಎಲ್ಲರೂ ಕೆಟ್ಟವರಲ್ಲ, ಬಿಜೆಪಿಯನ್ನು ಬೆಂಬಲಿಸದ ಅನೇಕರು ಇದ್ದಾರೆ ಎಂಬ ಆರೆಸ್ಸೆಸ್ಸ್ ಕುರಿತಂತೆ ನೀಡಿದ ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದು, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಪಶ್ಚಿಮ ಬಂಗಾಳದಲ್ಲಿ ನಡೆದ ರಾಜ್ಯ ಸಚಿವಾಲಯದ ಸಮಾರಂಭದಲ್ಲಿ, ಆರೆಸ್ಸೆಸ್ಸ್ ಅಷ್ಟು ಕೆಟ್ಟದೇನೂ ಅಲ್ಲ. ಬಿಜೆಪಿ ಮಾಡುವ ರಾಜಕೀಯವನ್ನು ಬೆಂಬಲಿಸದ ಜನರು ಆರೆಸ್ಸೆಸ್ಸ್ ನಲ್ಲಿ ಇನ್ನೂ ಇದ್ದಾರೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದ್ದರು. ಇದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿವೆ.

ಎಐಎಂಐಎಂ, ಕಾಂಗ್ರೆಸ್ ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳು ರಾಜಕೀಯ ಅವಕಾಶವಾದ ಮತ್ತು ಕೇಂದ್ರದಲ್ಲಿನ ಆಡಳಿತ ಪಕ್ಷಕ್ಕೆ ಸಹಕರಿಸುವ ಬ್ಯಾನರ್ಜಿ ಅವರ ಪ್ರಯತ್ನಗಳಿಗಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿವೆ.

- Advertisement -

ಮಮತಾ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ಆರೆಸ್ಸೆಸ್ಸ್, ಮಮತಾರಿಂದ ನಮಗೆ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ಹೇಳಿದೆ.

ಮಮತಾ ಅವರು ಆರೆಸ್ಸೆಸ್ ಅನ್ನು ಹೊಗಳಿರುವುದು ಇದೇ ಮೊದಲಲ್ಲ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ಹೇಳಿದ್ದಾರೆ.

2003 ರಲ್ಲಿ ಮಮತಾ ಅವರು ಆರೆಸ್ಸೆಸ್ ಅನ್ನು ‘ದೇಶಭಕ್ತರು’ ಎಂದು ಕರೆದಿದ್ದರು,ಅದಕ್ಕೆ  ಪ್ರತಿಯಾಗಿ ಆರೆಸ್ಸೆಸ್ ಅವರನ್ನು “ದುರ್ಗಾ” ಎಂದು ಕರೆದಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತೀಕ್ಷ್ಣವಾಗಿ ಈ ಕುರಿತು  ಪ್ರತಿಕ್ರಯಿಸಿದ್ದಾರೆ.

Join Whatsapp