ಮೀಟೂ ಕುರಿತು ವಿವಾದಾತ್ಮಕ ಹೇಳಿಕೆ| ದುಡಿಯುವ ಮಹಿಳೆಯರನ್ನು ವಿರೋಧಿಸಿಲ್ಲ- ನಟ ಮುಖೇಶ್ ಖನ್ನಾ ಸ್ಪಷ್ಟನೆ

Prasthutha|

ವಿಡಿಯೋದ ಭಾಗವನ್ನು ಕತ್ತರಿಸಿ ಹಂಚಿಕೊಳ್ಳಲಾಗಿದೆ- ಖನ್ನಾ

“ಮಹಿಳೆಯರು ಕೆಲಸಕ್ಕೆ ಕಾಲಿಟ್ಟ ನಂತರ ಮೀಟೂ ಸಮಸ್ಯೆ ಪ್ರಾರಂಭವಾಯಿತು” ಎಂದು ಟೀಕಿಸಿದ ನಟ ಮುಖೇಶ್ ಖನ್ನಾ ವ್ಯಾಪಕ ಟೀಕೆಗೊಳಗಾದ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

- Advertisement -

“ನಾನು ಕೆಲಸ ಮಾಡುವ ಮಹಿಳೆಯರನ್ನು ವಿರೋಧಿಸಿಲ್ಲ (ಅವರ ವಿರೋಧಿಯಲ್ಲ).ಈ ವಿವಾದಾತ್ಮಕ ಹೇಳಿಕೆಯನ್ನು ಕತ್ತರಿಸಿ ಹಂಚಲಾಗಿದ್ದು, ನಾನು ನನ್ನ ಪೂರ್ಣ ಸಂದರ್ಶನವನ್ನು ತೋರಿಸುತ್ತೇನೆ.. ಎಂದು ಅವರು ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.

ನಾನು ಮಹಿಳೆಯರ ಕುರಿತು ಯಾವ ರೀತಿಯ ಗೌರವಭಾವನೆ ಇರಿಸಿದ್ದೇನೆ ಎಂಬುದನ್ನು ಈ ಸಂದರ್ಶನದಲ್ಲಿ ನೀವು ನೋಡಬಹುದು” ಎಂದು ಮುಖೇಶ್ ಹೇಳಿದ್ದಾರೆ.

- Advertisement -