ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ ಯುವಕ| ಪತ್ರ ನೋಡಿ ದಂಗಾದ ಪೊಲೀಸರು!

Prasthutha|

ಉದ್ಯೋಗ ಲಭಿಸಿದರೆ ಪ್ರಾಣ ಒತ್ತೆಯಿಡುವೆನೆಂದು ಹರಕೆ ಹೊತ್ತ ಯುವಕನೋರ್ವ ರೈಲಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿದ್ದಾನೆ. ಮುಂಬೈಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಉದ್ಯೋಗ ಲಭಿಸಿದ ಬೆನ್ನಿಗೆ ಹರಕೆ ತೀರಿಸಲು ಯುವಕ ಆತ್ಮಹತ್ಯೆಗೈದಿದ್ದಾನೆ. ತಮಿಳುನಾಡಿನ ಕನ್ಯಾಕುಮಾರಿಯ ಎಲ್ಲುವಿಳ ನಿವಾಸಿ ನವೀನ್ (32) ಎಂಬಾತ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಶನಿವಾರ ಮುಂಜಾನೆ ನಾಗರ ಕೊಯಿಲ್ ಪುತ್ತೇರಿ ಎಂಬ ಸ್ಥಳದಲ್ಲಿ ರೈಲು ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ. ಮುಖಗುರುತು ಅಸಾಧ್ಯವಾಗುವ ರೀತಿಯಲ್ಲಿ ಮೃತದೇಹ ಛಿದ್ರವಾಗಿತ್ತು. ಸಮೀಪದಲ್ಲೇ ಪಾಸ್‌ಪೋರ್ಟ್ ಮತ್ತು ಅಗತ್ಯ ದಾಖಲೆಗಳೊಂದಿಗೆ ಒಂದು ಪತ್ರವೂ ಲಭಿಸಿದೆ. ಆತ್ಮಹತ್ಯೆಗೆ ಕಾರಣ ಬರೆದಿಟ್ಟಿದ್ದನ್ನು ಕಂಡು ಪೋಲೀಸರು ನಿಬ್ಬೆರಗಾಗಿದ್ದಾರೆ. ಹರಕೆ ನೆರವೇರಿಸಲು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿತ್ತು.

- Advertisement -

ಇಂಜಿನಿಯರಿಂಗ್ ಮುಗಿಸಿದ ಬಳಿಕ ಧೀರ್ಘಕಾಲ ಉದ್ಯೋಗ ಲಭಿಸದೆ ಜಿಗುಪ್ಸೆಗೊಂಡಿದ್ದ ಯುವಕ ಉದ್ಯೋಗ ಲಭಿಸಿದಲ್ಲಿ ಪ್ರಾಣ ನೀಡುವುದಾಗಿ ಹರಕೆಯಿಟ್ಟಿದ್ದ. ಈ ಮಧ್ಯೆ ಮುಂಬೈ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಲಭಿಸಿದ ಕೆಲವೇ ದಿನಗಳ ಬಳಿಕ ಯುವಕ ಈ ದುಷ್ಕೃತ್ಯ ನಡೆಸಿದ್ದಾನೆ.

- Advertisement -