ಅಮಿತ್ ಶಾ ಅಸ್ಸಾಮ್ ಭೇಟಿ | CAA ವಿರೋಧಿ ಹೋರಾಟದ ಎಚ್ಚರಿಕೆ ನೀಡಿದ AASU

Prasthutha|

ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 9 ರಿಂದ ಮೂರು ದಿನಗಳ ಕಾಲ ಅಸ್ಸಾಮ್ ಭೇಟಿ ನೀಡಲಿದ್ದಾರೆ. ಈ ವೇಳೆ ಕೇಂದ್ರ ಗೃಹ ಸಚಿವರಿಗೆ CAA ವಿರೋಧಿ ಹೋರಾಟದ ಬಿಸಿ ತಟ್ಟುವ ಸಾಧ್ಯತೆಯಿದೆ.

- Advertisement -

ದೇಶದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾದ ಬಳಿಕ CAA ಕಾಯ್ದೆಯನ್ನು ಜಾರಿಗೆ ತರಲಾಗುವುದೆಂದು ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ ಈಶಾನ್ಯ ರಾಜ್ಯಗಳಿಂದ ಪ್ರತಿಭಟನೆಯ ಎಚ್ಚರಿಕೆ ಬಂದಿದೆ.

CAA ಜಾರಿಗೊಳಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುತ್ತೇವೆ ಎಂದು ಅಸ್ಸಾಮ್ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಶಾಸಕ ಅಖಿಲ್ ಗೊಗೋಯ್ ನೇತೃತ್ವದ ರಾಜಕೀಯ ಪಕ್ಷವಾದ ರೈಜೋರ್ ದಳ ಎಂದು ತಿಳಿಸಿದೆ. ವಿದೇಶಿ ಮೂಲದ ಹಿಂದೂಗಳನ್ನಾಗಲೀ ಅಥವಾ ಮುಸ್ಲಿಮರನ್ನಾಗಲೀ ಅಸ್ಸಾಮ್ ಸ್ವೀಕರಿಸುವುದಿಲ್ಲ ಎಂದು AASU ತಿಳಿಸಿದೆ.

- Advertisement -

ವಿವಾದಾತ್ಮಕ CAA ಅನ್ನು ಜಾರಿಗೆ ತರಲು ಯಾವುದೇ ಪ್ರಯತ್ನವನ್ನು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (NESO) ಎಚ್ಚರಿಕೆ ನೀಡಿದೆ. ಇದು ಸ್ಥಳೀಯ ನಾಗರಿಕರಿಗೆ ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದೆ.

ಸಿಎಎ ಜಾರಿಗೊಳಿಸುವ ಯಾವುದೇ ಪ್ರಯತ್ನವು ಮೇಘಾಲಯದಲ್ಲಿ ಅಶಾಂತಿಗೆ ಕಾರಣವಾಗಲಿದೆ ಎಂದು ಮೇಘಾಲಯದಲ್ಲಿ ಖಾಸಿ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಹೇಳಿದೆ. “ಅಕ್ರಮ ವಲಸಿಗರ” ಪ್ರವೇಶವನ್ನು ಪರಿಶೀಲಿಸಲು ಮೇಘಾಲಯದಲ್ಲಿ ಒಳ-ಲೈನ್ ಪರವಾನಗಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಕೆಎಸ್‌ಯು ಆಗ್ರಹಿಸಿದೆ.

ಕೇಂದ್ರ ಸರ್ಕಾರವು CAA ಕಾನೂನು ಜಾರಿಗೆ ತರಲು ಪ್ರಯತ್ನಿಸಿದರೆ ಈಶಾನ್ಯ ರಾಜ್ಯದ ಹಲವಾರು ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಎಚ್ಚರಿಸಿದೆ.

Join Whatsapp