ಅರುಣಾಚಲ ಪ್ರದೇಶ | ‘ನಮ್ಮ ಭೂಭಾಗದಲ್ಲಿ ಗ್ರಾಮ ನಿರ್ಮಿಸಿದ್ದೇವೆ’ ಎಂದ ಚೀನಾ

Prasthutha|

ಬೀಜಿಂಗ್ : ಅರುಣಾಚಲ ಪ್ರದೇಶದಲ್ಲಿ ಹೊಸ ಗ್ರಾಮವೊಂದನ್ನು ಚೀನಾ ನಿರ್ಮಿಸಿದೆ ಎನ್ನಲಾದ ವರದಿಗಳಿಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ತನ್ನ ಭೂ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆ ಸಹಜವಾದುದು ಎಂದು ಹೇಳಿದೆ.

- Advertisement -

ಚೀನಾ-ಭಾರತ ಗಡಿ ಪ್ರದೇಶದ ಪೂರ್ವ ವಲಯ ಅಥವಾ ಝಾಂಗ್ನಾನ್ ಪ್ರಾಂತ್ಯದ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ. ಇದನ್ನು ಅರುಣಾಚಲ ಪ್ರದೇಶ ಎಂದು ಗುರುತಿಸುವವರನ್ನು ನಾವು ನೋಡಿಲ್ಲ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ಹೇಳಿದ್ದಾರೆ.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ನ ಭಾಗವೆಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ, ಅದು ದೇಶದ ಅವಿಭಾಜ್ಯ ಅಂಗ ಎಂಬುದು ಭಾರತದ ಸ್ಥಿರ ನಿಲವು.

- Advertisement -

2020, ನ.1ರಂದು ನಮೂದಿಸಲ್ಪಟ್ಟಿರುವ ಉಪಗ್ರಹ ಚಿತ್ರವೊಂದರಲ್ಲಿ ಭಾರತ-ಚೀನಾ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ, ಭಾರತೀಯ ಭೂ ಭಾಗದಲ್ಲಿ ಗ್ರಾಮ ನಿರ್ಮಾಣಗೊಂಡಿರುವುದು ಕಂಡು ಬಮದಿದೆ. ಈ ಗ್ರಾಮ ವಾಸ್ತವಿಕ ಗಡಿಯಿಂದ 4.5 ಕಿ.ಮೀ ಒಳಗಿದೆ ಎನ್ನಲಾಗುತ್ತಿದೆ.  

Join Whatsapp