ಉಡುಪಿಯ ಬಿಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಕೈ ಸೇರದ ವೇತನ; ವೈದ್ಯರು, ಸಿಬ್ಬಂದಿಗಳಿಂದ ಧರಣಿ

Prasthutha|

ಉಡುಪಿ: ಉದ್ಯಮಿ ಬಿಆರ್ ಶೆಟ್ಟಿಗೆ ಸಂಬಂಧಿಸಿದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಹಾಗೂ ನರ್ಸ್ ಗಳು ತಮಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಮುಷ್ಕರಕ್ಕೆ ಮುಂದಾಗಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಯಾವುದೇ ಕೆಲಸಕ್ಕೆ ಹಾಜರಾಗದೇ ಆಸ್ಪತ್ರೆ ಪ್ರವೇಶ ದ್ವಾರದಲ್ಲಿಯೇ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ.  

- Advertisement -

ಆಸ್ಪತ್ರೆಯ ಸುಮಾರು 200 ಸಿಬ್ಬಂದಿಗಳು ಧರಣಿ ನಿರತವಾಗಿದ್ದು, ವೈದ್ಯರು, ನರ್ಸ್ ಗಳು,ರಿಸೆಪ್ಶನ್, ನಿರ್ವಹಣಾ ವಿಭಾಗದ ಸಿಬ್ಬಂದಿಗಳೂ ಸೇರಿದ್ದಾರೆ. ಏಕಾಏಕಿ ನಡೆಸಿದ ಧರಣಿಯಿಂದಾಗಿ ಆಸ್ಪತ್ರೆಗೆ ಹೆರಿಗೆ ಹಾಗೂ ಇನ್ನಿತರ ಕಾರಣಕ್ಕಾಗಿ ಆಗಮಿಸುತ್ತಿರುವ ರೋಗಿಗಳಿಗೆ ಯಾವುದೇ ಸ್ಪಂದನೆ ಸಿಗದೇ ಸಂಕಷ್ಟಪಡುವಂತಾಗಿದೆ

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮನವೊಲಿಸಲು ಯತ್ನಿಸಿದ್ದಾರೆ. ಸೂಕ್ತ ಅನುಮತಿ ಪಡೆದು ಮುಷ್ಕರಕ್ಕೆ ಹೋಗಬೇಕು. ಏಕಾಏಕಿ ಮುಷ್ಕರ ಮಾಡಿದರೆ ರೋಗಿಗಳು ಸಮಸ್ಯೆಗೀಡಾಗುತ್ತಾರೆಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಈ ಮುಂಚೆ ಕೂಡ ಸಂಬಳದ ವಿವಾದ ತಲೆದೋರಿತ್ತು. ಕೆಲವು ತಿಂಗಳ ಹಿಂದೆ ಡಾ.ಬಿ.ಆರ್ ಶೆಟ್ಟಿ ಸುದ್ದಿಗೋಷ್ಟಿ ನಡೆಸಿ ಆಸ್ಪತ್ರೆಯನ್ನು ನಡೆಸಲು ಸಮರ್ಥರಿರುವುದಾಗಿ ಹೇಳಿದ್ದರು.