ಫಿನ್‌ಲ್ಯಾಂಡ್: ಒಂದು ಕಾಲದ ನಂಬರ್ ಒನ್ ಮೊಬೈಲ್ ಫೋನ್ ತಯಾರಕ ಕಂಪೆನಿ ನೋಕಿಯಾ 14,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿಕೊಂಡಿದೆ. 5G ಸಾಧನಗಳ ಮಾರಾಟದಲ್ಲಿ ಕುಸಿತದಿಂದಾಗಿ ಈ ನಿರ್ಧಾರ ಎಂದು ಫಿನ್ನಿಷ್ ಟೆಲಿಕಾಂ ಕಂಪನಿ ನೋಕಿಯಾ ತಿಳಿಸಿದೆ.
ಮೂರನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ. 20 ರಷ್ಟು ಕುಸಿತದ ನಂತರ ಕಂಪನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಕೆಲವು ವರ್ಷಗಳ ಹಿಂದೆ ನೋಕಿಯಾ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ತಾನದಲ್ಲಿದ್ದ ಕಂಪನಿಯಾಗಿತ್ತು. ಆದರೆ ಇತ್ತೀಚೆಗೆ ನೋಕಿಯಾ ಕಂಪನಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ನೋಕಿಯಾ ಕಂಪನಿ ಟೆಕ್ ವಲಯದಲ್ಲಿ ವೇಗವಾಗಿ ಬೆಳೆಯಲು ಸಾಧ್ಯವಾಗದೇ ಅಪಾರ ನಷ್ಟವನ್ನು ಕಂಪನಿ ಅನುಭವಿಸಿದೆ.
ನೋಕಿಯಾ ಯುಎಸ್‌ನಂತಹ ದೇಶಗಳಲ್ಲಿ 5G ಸಾಧನಗಳ ಮಾರಾಟಕ್ಕಾಗಿ ಹೋರಾಡುತ್ತಿದೆ. ಕಂಪನಿ ಕಡಿಮೆ ಲಾಭದಾಯಕ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸುವ ಮೂಲಕ ಈ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.