ಉಡುಪಿ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚುವವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ: WIM

Prasthutha|

ಮಂಗಳೂರು: ಉಡುಪಿಯ ಪ್ರಕರಣವೊಂದನ್ನು ಕೋಮು ಬಣ್ಣ ಹಚ್ಚಿ ಸಮಾಜದಲ್ಲಿ ಸೌಹಾರ್ದ ಕೆಡಿಸಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಣಿಪುರದ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿ ಜನಾಕ್ರೋಶದ ದಿಕ್ಕು ತಪ್ಪಿಸುವ  ಸಲುವಾಗಿ ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ಸಹಪಾಠಿಗಳು ನಡೆಸಿದ ವೀಡಿಯೋ ಪ್ರಕರಣವನ್ನು ಬಿಜೆಪಿ ಮತ್ತು ಸಂಘಪರಿವಾರ ರಾಷ್ಟ್ರಮಟ್ಟದಲ್ಲಿ ವೈಭವೀಕರಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ.ಇದಕ್ಕಾಗಿ ನಿರಂತರ ಫೇಕ್ ನ್ಯೂಸ್ ಗಳನ್ನು ವ್ಯಾಪಕವಾಗಿ ಹರಡಿರುವ ಬಿಜೆಪಿಯ  ಐಟಿ ಸೆಲ್ ನೀಚ ರಾಜಕಾರಣಕ್ಕೆ ಇಳಿದಿರುವುದು ಅಕ್ಷಮ್ಯ.

ಉಡುಪಿ ಜಿಲ್ಲಾ ಎಸ್ ಪಿ ಯವರು ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ   ಸ್ಪಷ್ಟಪಡಿಸಿದ ಮರುದಿನ ಬಿಜೆಪಿಯವರ ಒತ್ತಾಯದ ಮೇರೆಗೆ ಆ ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣವನ್ನು ದಾಖಲಾಗಿದೆ. ಅಷ್ಟೇ ಅಲ್ಲ ಬಿಜೆಪಿಯ ಒತ್ತಡದ ಮೇರೆಗೆ  ಪ್ರಕರಣದ ತನಿಖೆಗಾಗಿ  ಮಹಿಳಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯೆ ಉಡುಪಿಗೆ ಆಗಮಿಸಿದ್ದು ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯರ ಮೊಬೈಲ್ ವಶಪಡಿಸಿ 40 ಗಂಟೆಗಳ ರಿಫ್ರೆಶ್  ಮಾಡಿದರೂ  ಕೂಡ ಏನೂ ಪುರಾವೆ ಸಿಗಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

- Advertisement -

ಈಗಾಗಲೇ  ಶಿರವಸ್ತ್ರದ ವಿಚಾರವಾಗಿ ಕೋಮುದ್ವೇಷವು ಉಡುಪಿಯಿಂದಲೇ ಶುರುವಾಗಿದ್ದು ಇಡೀ ರಾಷ್ಟ್ರಾದ್ಯಂತ ವ್ಯಾಪಿಸಿ ಹೆಣ್ಣು ಮಕ್ಕಳ ಸಂವಿಧಾನಿಕ ಹಕ್ಕಾದ ಶಿರವಸ್ತ್ರವನ್ನು ನಿಷೇಧಿಸಿ ಶಿಕ್ಷಣವನ್ನು ಮೊಟಕುಗೊಳಿಸುವುದಕ್ಕೆ ಕಾರಣರಾಗಿರುತ್ತಾರೆ.ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬಹುದಾದ ವಿಚಾರಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಗುಲ್ಲೆಬ್ಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವುದು ಇವರ ಚಾಳಿಯಾಗಿಬಿಟ್ಟಿದೆ. ಆದ್ದರಿಂದ ಇಂತಹವರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

Join Whatsapp