ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ಯಾರೂ ರಾಷ್ಟ್ರಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ

Prasthutha|

ಮುಂಬೈ: ಕೇಂದ್ರ ಸರಕಾರದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಟಾಂಗ್ ನೀಡಿದ್ದು, ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ಯಾರೂ ರಾಷ್ಟ್ರಭಕ್ತರಾಗುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಈ ಅಭಿಯಾನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದು ಎಂದು ನಾನು ಅರ್ಥೈಸುತ್ತೇನೆ. ಆದರೆ ಸ್ವಾಂತತ್ರ್ಯ ದೊರೆತು 75 ವರ್ಷ ಕಳೆದರೂ ನಮ್ಮ ಪ್ರಜಾಪ್ರಭುತ್ವ ಎಷ್ಟರ ಮಟ್ಟಿಗೆ ಉಳಿದಿದೆ ಎಂಬುದನ್ನು ನಾವು ಯೋಚಿಸಬೇಕಿದೆ ಎಂದರು.

ತಮ್ಮ ತಂದೆ ಬಾಳ್ ಠಾಕ್ರೆ ಅವರು 1960 ರಲ್ಲಿ ಆರಂಭಿಸಿದ ಕಾರ್ಟೂನ್ ನಿಯತಕಾಲಿಕವಾದ ‘ಮಾರ್ಮಿಕ್’ ನ 62 ನೇ ಸಂಸ್ಥಾಪನಾ ದಿನದಂದು ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಅವರು, ವ್ಯಂಗ್ಯಚಿತ್ರಕಾರರು ಭಾರತದ “ಗುಲಾಮಗಿರಿಯೆಡೆಗಿನ” ಪಯಣದ ಬಗ್ಗೆ ಜನರನ್ನು ಜಾಗೃತಿ ಮಾಡಬೇಕಿದೆ ಎಂದು ಹೇಳಿದರು.

- Advertisement -

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಸ್ಥಾಪಿಸಲು ಮನವಿ ಮಾಡಿದೆ. ಆದರೆ ಇತ್ತೀಚೆಗೆ ನಾನು, ಬಡ ವ್ಯಕ್ತಿಯೊಬ್ಬ “ನನ್ನ ಬಳಿ ತ್ರಿವರ್ಣ ಧ್ವಜವಿದೆ, ಆದರೆ ಅದನ್ನು ಸ್ಥಾಪಿಸಲು ಮನೆ ಇಲ್ಲ” ಎಂದು ಹೇಳುವ ವ್ಯಂಗ್ಯ ಚಿತ್ರವೊಂದನ್ನು ಗಮನಿಸಿದ್ದು, ಸದ್ಯ‌ ದೇಶದ ಸ್ಥಿತಿ ಈ ರೀತಿ ಇದೆ ಎಂದು ಠಾಕ್ರೆ ಹೇಳಿದ್ದಾರೆ.

Join Whatsapp