ಜಾರಕಿಹೊಳಿ ಸೆಕ್ಸ್ CD ಹಗರಣ | SIT ತನಿಖೆಯಿಂದ ಯಾರಿಗೂ ಶಿಕ್ಷೆ ಆಗಲ್ಲ : ಹೆಚ್ ಡಿಕೆ
Prasthutha: March 11, 2021

ಮೈಸೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ CD ಹಗರಣವನ್ನು ಎಸ್ ಐಟಿ ತನಿಖೆ ವಹಿಸಿರುವ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ ಎಸ್ ಐಟಿ ತನಿಖೆಯಿಂದ ಯಾರಿಗೂ ಶಿಕ್ಷೆ ಆಗಲ್ಲ ಎಂದು ಹೇಳಿದ್ದಾರೆ.
“ಎಸ್ ಐಟಿ ತನಿಖೆಯಿಂದ ಯಾರಿಗೂ ಶಿಕ್ಷೆಯೂ ಆಗಲ್ಲ. ಇದು ತಿಪ್ಪೆ ಸಾರಿಸೋ ಕೆಲಸ ಅಷ್ಟೇ. ಎಸ್ ಐಟಿ ತನಿಖೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಯಾರ ವಿರುದ್ಧ ತನಿಖೆ ಮಾಡುತ್ತಾರೆ? ಏನಂತ ತನಿಖೆ ಮಾಡುತ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ” ಎಂದು ಅವರು ಪ್ರಶ್ನಿಸಿದ್ದಾರೆ.
ಎಫ್ ಎಸ್‌ಎಲ್ ರಿಪೋರ್ಟ್ ನಲ್ಲಿ ನಕಲಿ ಅಂತ ಬರಬಹುದು. ಈ ಹಿಂದೆಯೂ ಅದೆಷ್ಟೋ ತನಿಖಾ ವರದಿಗಳು ಮೂಲೆ ಗುಂಪಾಗಿವೆ. ಮೇಟಿ ಪ್ರಕರಣದಲ್ಲೂ ಕ್ಲೀನ್ ಚಿಟ್ ಆಯ್ತು ಎಂದು ಹೇಳಿದರು.
