“ಸ್ಕ್ಯಾನಿಯಾ ಬಸ್ಸಿನ ಭಾರತದ ಗುತ್ತಿಗೆಗೆ ಕೇಂದ್ರ ಸಚಿವ ಗಡ್ಕರಿ ಲಂಚ ಪಡೆದಿದ್ದಾರೆ” : ಸ್ವೀಡಿಶ್ ಮಾಧ್ಯಮಗಳ ವರದಿ

Prasthutha|

ಹೊಸದಿಲ್ಲಿ : ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಸ್ ತಯಾರಕ ಸಂಸ್ಥೆಯಾದ ಸ್ಕ್ಯಾನಿಯಾ ಮತ್ತು ಭಾರತೀಯ ಕಂಪನಿಯೊಂದರ ನಡುವಿನ ಒಪ್ಪಂದಕ್ಕಾಗಿ ಲಂಚವಾಗಿ ಸ್ಕ್ಯಾನಿಯಾ ಐಷಾರಾಮಿ ಬಸ್ ಪಡೆದಿದ್ದಾರೆ ಎಂದು ಸ್ವೀಡಿಷ್ ಮಾಧ್ಯಮ ವರದಿ ಮಾಡಿದೆ.  ಭಾರತೀಯ ಕಂಪನಿಗೆ ನಿತಿನ್ ಗಡ್ಕರಿ ಅವರ ಕುಟುಂಬದೊಂದಿಗೆ ಸಂಪರ್ಕ ಇದೆ ಎಂದು ಸ್ವೀಡಿಷ್ ಮಾಧ್ಯಮ ತಿಳಿಸಿದೆ.

- Advertisement -

‘2017 ರ ಕೊನೆಯಲ್ಲಿ, ಸ್ಕ್ಯಾನಿಯಾ ವಿಶೇಷವಾಗಿ ವಿನ್ಯಾಸಗೊಳಿಸಿದ ಐಷಾರಾಮಿ ಬಸ್ ಅನ್ನು ಭಾರತದ ಸಾರಿಗೆ ಸಚಿವರಿಗೆ ಉಡುಗೊರೆಯಾಗಿ ನೀಡಿದೆ ಎಂಬುದಕ್ಕೆ ಸ್ಕ್ಯಾನಿಯಾದ ಲೆಕ್ಕ ಪರಿಶೋಧಕರಿಗೆ ಪುರಾವೆಗಳು ದೊರೆತಿವೆ. ಸ್ಕ್ಯಾನಿಯಾ ಒಡೆತನದ ಜರ್ಮನ್ ವಾಹನ ತಯಾರಕ ವೋಕ್ಸ್‌ವ್ಯಾಗನ್, ಭಾರತದಲ್ಲಿ ನಿಯೋಜನೆ ಪಡೆಯುವ ಉದ್ದೇಶದಿಂದ ಬಸ್ ಅನ್ನು ಭಾರತೀಯ ಸಚಿವರಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಸ್ವೀಡಿಷ್ ಸುದ್ದಿ ವಾಹಿನಿಯ ಮೂಲಗಳು ತಿಳಿಸಿವೆ.

ಸಚಿವರ ಮಗಳ ಮದುವೆಯಲ್ಲಿ ಈ ಬಸ್ಸನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಆದರೆ ಗಡ್ಕರಿ ಅವರ ಕಚೇರಿ ಇದು ‘ಮಾಧ್ಯಮ ಕಲ್ಪನೆ’ ಎಂದು ಹೇಳಿದೆ. ಮದುವೆಗೆ ಅತಿಥಿಗಳನ್ನು ತಲುಪಿಸಲು 50 ಚಾರ್ಟರ್ಡ್ ವಿಮಾನಗಳನ್ನೂ ಉಪಯೋಗಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖವಿದೆ. ಇದರ ಎಲ್ಲಾ ವೆಚ್ಚವನ್ನು ವೋಕ್ಸ್‌ವ್ಯಾಗನ್‌ನ ಹಣಕಾಸು ಕಂಪನಿ ಭರಿಸಿದೆ ಎಂದು ಸ್ವೀಡಿಷ್ ವಾಹಿನಿ ವರದಿ ಮಾಡಿದೆ.

- Advertisement -