ಚುನಾವಣೆಗಾಗಿ ಕಂಬಳಿ ಹೊದ್ದ ಮಾತ್ರಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಲ್ಲ: ಬೊಮ್ಮಾಯಿಗೆ ಪ್ರಿಯಾಂಕ್ ಖರ್ಗೆ ಟಾಂಗ್

Prasthutha|

ಬೆಂಗಳೂರು: ಕಂಬಳಿ ನೇಯ್ದವರ ಅಂಬಲಿ ಕಿತ್ತುಕೊಂಡ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇರುವ 8 ನಿಗಮಗಳಿಗೆ ಈ ವರ್ಷ ಅನುದಾನವನ್ನೇ ನೀಡಿಲ್ಲ. ದೇವರಾಜ್ ಅರಸು ನಿಗಮಕ್ಕೆ ಕೇವಲ 80 ಕೋಟಿ ಅನುದಾನ ನೀಡಿ, ಕೈ ತೊಳೆದುಕೊಂಡಿದ್ದೀರಿ. 2 ವರ್ಷದಿಂದ ಮಕ್ಕಳ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದ್ದೀರಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಖರ್ಗೆ ಕುಟುಕಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣೆಗಾಗಿ ಕಂಬಳಿ ಹೊದ್ದ ಮಾತ್ರಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಲ್ಲ. ಮೊದಲು ಹಿಂದುಳಿದ ವರ್ಗಗಳಿಗೆ ನಿಮ್ಮ ಸರ್ಕಾರದಿಂದ ಆಗಿರುವ ಅನ್ಯಾಯ ಸರಿಪಡಿಸಲು ಕ್ರಮ ಕೈಗೊಂಡು ಅವರ ಹಿತ ಕಾಪಾಡಿ. ಇಲ್ಲದಿದ್ದಲ್ಲಿ ನಿಮ್ಮ ಆತ್ಮಸಾಕ್ಷಿ ಚುಚ್ಚದಿರಬಹುದು ಕಂಬಳಿ ಮಾತ್ರ ಚುಚ್ಚುವುದು ನಿಶ್ಚಿತ ಎಂದು ಟಾಂಗ್ ನೀಡಿದ್ದಾರೆ.

Join Whatsapp