ಮುಂಬೈ : ತಮ್ಮ ಪ್ರತಿಭಟನೆಯ ವೇಳೆ ವಾಹನಗಳಿಗೆ ಹಾನಿ ಮಾಡಿರುವ ಯಾವುದೇ ಸಾಕ್ಷ್ಯವಿಲ್ಲದ ಕಾರಣ ಏಳು ಮಂದಿ ಸಿಎಎ ವಿರೋಧಿ ಹೋರಾಟಗಾರರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪಾಲಿಸುವುದಾಗಿ ಕೋರ್ಟ್ ಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನಕಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ.
“ವಾಹನಗಳಿಗೆ ಹಾನಿ ಮಾಡಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ” ಎಂದು ನ್ಯಾ. ಎಂ.ಜಿ. ಸೆವ್ಲಿಕಾರ್ ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಹೀಗಾಗಿ ಈ ವಿಷಯದಲ್ಲಿ ನಾನು ಇವರಿಗೆ ನಿರೀಕ್ಷಣಾ ಮಂಜೂರು ನೀಡಲು ಒಲವು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಡಿ.20ರಂದು ಶಿವಾಜಿ ಪ್ರತಿಮೆ ಮುಂದೆ ಸಭೆ ಸೇರಿದ್ದ ಪ್ರತಿಭಟನಕಾರರು, ರಸ್ತೆ ತಡೆ ಮಾಡಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತೆರಳಿತ್ತು.