ಮಂಗಳೂರು | ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿಲ್ಲ: ರಮಾನಾಥ್ ರೈ

Prasthutha|

ಮಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿಲ್ಲ ಎಂದು ಮಾಜಿ ಸಚಿವ ರಮಾನಾಥ್ ರೈ ಸ್ಪಷ್ಟನೆ ನೀಡಿದ್ದಾರೆ.

- Advertisement -

ಈ ಬಗ್ಗೆ  ಮಾತನಾಡಿದ ಅವರು, ಇವತ್ತು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಅಪಮಾನದ ಬಗ್ಗೆ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂಬ ಚರ್ಚೆ  ಆಗಿದೆ. ಈ ವೇಳೆ ಕೆಲವು ಭಿನ್ನಾಭಿಪ್ರಾಯಗಳು ಬಂದಿವೆ. ಸ್ವಲ್ಪ ಜನ ಎಗ್ರೆಸಿವ್ ಆಗಿ ಪ್ರತಿಭಟನೆ ಮಾಡಬೇಕು ಎಂಬ ಇರಾದೆ ಇತ್ತು ಎಂದು ಹೇಳಿದ್ದಾರೆ.

ಇವತ್ತು ಯುವ ಕಾಂಗ್ರೆಸ್ ನವರು ಒಂದು ಪಾದಯಾತ್ರೆ ಮಾಡುತ್ತಾರೆ. ಎಲ್ಲಾ ಬ್ಲಾಕ್ ಸೇರಿ ಕ್ಷೇತ್ರಾದ್ಯಂತ ಈ ಪ್ರತಿಭಟನಾ ಪಾದಯಾತ್ರೆ ಮಾಡಲಿದ್ದೇವೆ. ಮಾತನಾಡುವಾಗ ಸ್ವಲ್ಪ ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂದು ಚರ್ಚೆ ಆಗಿತ್ತು ಎಂದು ತಿಳಿಸಿದ್ದಾರೆ.

- Advertisement -

ಜನವರಿ 26 ರಂದು ನಾರಾಯಣ ಗುರುಗಳ ಟ್ಯಾಬ್ಲೋ ಇರುವಂತೆ ಕೇಂದ್ರ ಮಾಡಬೇಕು: ಪರಮೇಶ್ವರ್

ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಜನವರಿ 26 ರಂದು ನಾರಾಯಣ ಗುರುಗಳ ಟ್ಯಾಬ್ಲೋ ಇರುವಂತೆ ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೇರಳ ಸರ್ಕಾರ ಗಣರಾಜ್ಯೋತ್ಸವ ಪೆರೇಡ್‍ ಗೆ ನಾರಾಯಣ ಗುರು ಟ್ಯಾಬ್ಲೊ ಕಲಿಸಿತ್ತು. ಆದರೆ ಕೇಂದ್ರ ಸರ್ಕಾರ  ಇದನ್ನು ತಿರಸ್ಕರಿಸಿದೆ. ಯಾಕೆ ಈ ಟ್ಯಾಬ್ಲೋ ತಿರಸ್ಕರಿಸಿದ್ದಾರೆ ಎಂಬುದು ಇಡೀ ದೇಶದಲ್ಲಿ ಪ್ರಶ್ನೆ ಹುಟ್ಟಿದೆ ಎಂದು ಹೇಳಿದ್ದಾರೆ.

ನಾರಾಯಣ ಗುರು ಯಾವುದೇ ರೀತಿಯ ಪ್ರಚೋದನಕಾರಿಯತಂಹ ವಿಚಾರಗಳನ್ನು ತಂದು ಜನರಿಗೆ ತಿಳಿಸಿಲ್ಲ.ಸಮಾನತೆಯನ್ನು ಪ್ರತಿಪಾದನೆ ಮಾಡಿದ್ದಾರೆ. ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾಕೆ ಈ ತಿರಸ್ಕರ ಮಾಡಿದೆ ಎಂದು ಸ್ಪಷ್ಟಣೆ ಕೂಡಾ ನೀಡಿಲ್ಲ ಎಂದು ತಿಳಿಸಿದ್ದಾರೆ.



Join Whatsapp