ಹಿಮಾಚಲ ಪ್ರದೇಶ । ಸಂಘಪರಿವಾರ ಕಾರ್ಯಕರ್ತರಿಂದ ಮತ್ತೊಂದು ದರ್ಗಾ ಧ್ವಂಸ

Prasthutha|

ಶಿಮ್ಲಾ: ಸಂಘಪರಿವಾರದ ಕಾರ್ಯಕರ್ತರು ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದರ್ಗಾವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

15 ದಿನಗಳ ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಸಂಘಪರಿವಾರ ನಡೆಸುತ್ತಿರುವ ಎರಡನೇ ದರ್ಗಾ ಧ್ವಂಸ ಪ್ರಕರಣ ಇದಾಗಿದೆ.
ದರ್ಗಾವನ್ನು ಹೊಡೆದುರುಳಿಸುವ ವೀಡಿಯೋವನ್ನು ಕಮಲ್ ಗೌತಮ್ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ಈ ಹಿಂದೆಯೋ ಕೂಡ ಸಂಘಪರಿವಾರದ ಕಾರ್ಯಕರ್ತ ಹರೀಶ್ ರಾಮ್ಕಾಲಿ ಎಂಬಾತ ಇತರರೊಂದಿಗೆ ಸೇರಿಕೊಂಡು ದರ್ಗಾವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

Join Whatsapp