ಲಖನೌ : ವಿವಾದಾತ್ಮಕ ವೆಬ್ ಸೀರಿಸ್ ‘ತಾಂಡವ್’ ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಬಗ್ಗೆ ದಾಖಲಾಗಿರುವ ಎಫ್ ಐಆರ್ ಸಂಬಂಧ ಅಮೆಝಾನ್ ಪ್ರೈಮ್ ವೀಡಿಯೊದ ಭಾರತೀಯ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
‘ತಾಂಡವ್’ ವೆಬ್ ಸೀರೀಸ್ ನಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆ ಗಾಗೂ ವಿದ್ಯಾರ್ಥಿ ರಾಜಕೀಯವನ್ನು ಕಟುವಾಗಿ ಟೀಕಿಸಲಾಗಿತ್ತು. ನ್ಯಾ. ಸಿದ್ದಾರ್ಥ ನೇತೃತ್ವದ ನ್ಯಾಯಪೀಠ, ಪುರೋಹಿತ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
“ಕೇವಲ ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೆ, ಮೇಲ್ವರ್ಗ ಹಾಗೂ ಪರಿಶಿಷ್ಟ ಜಾತಿಗಳ ನಡುವಿನ ಅಂತರವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.