ಗೋಡ್ಸೆಗೆ ದೇವಸ್ಥಾನ ಕಟ್ಟಿದಾತ ಈಗ ‘ಗಾಂಧಿವಾದ’ದ ಕಾಂಗ್ರೆಸ್ ಸೇರ್ಪಡೆ!

Prasthutha|

ಭೋಪಾಲ್ : ಒಂದು ಕಾಲದಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಗೆ ದೇವಸ್ಥಾನ ಕಟ್ಟಿ ಸುದ್ದಿಯಾಗಿದ್ದ ಹಿಂದೂ ಮಹಾಸಭಾದ ಮುಖಂಡ ಈಗ ಕಾಂಗ್ರೆಸ್ ಸೇರಿ ಮತ್ತೆ ಸುದ್ದಿಯಾಗಿದ್ದಾನೆ. “ಗೋಡ್ಸೆ ಬಗ್ಗೆ ಸುಳ್ಳು ಪುಸ್ತಕಗಳನ್ನು ನೀಡಿ ನನ್ನನ್ನು ಹಿಂದೂ ಮಹಾಸಭಾ ಮುಖಂಡರು ತಪ್ಪು ದಾರಿಗೆ ಎಳೆದಿದ್ದರು. ಆದರೆ, ನನ್ನ ತಪ್ಪು ಇತ್ತೀಚೆಗೆ ಅರಿವಾಗಿದ್ದು, ಬಳಿಕ ಸಂಘಟನೆ ತೊರೆದೆ” ಎಂದು ಕಾಂಗ್ರೆಸ್ ಸೇರಿರುವ ಬಾಬೂ ಲಾಲ್ ಚೌರಾಸಿಯಾ ಹೇಳಿದ್ದಾನೆ.

- Advertisement -

ಇದೀಗ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿಗೆ ಇಳಿದಿದೆ. “ಇದು ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಗಾಂಧೀಜಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನು ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಮಾತ್ರ ಜಪಿಸುತ್ತದೆ” ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

“ಗೋಡ್ಸೆ ವೈಭವೀಕರಣದ ಮೂಲಕ ಬಿಜೆಪಿ ಸರಕಾರಕ್ಕೆ ಮಸಿ ಬಳಿಯಲು ಕಾಂಗ್ರೆಸ್ ಸಂಚು ರೂಪಿಸಿತ್ತು ಎನ್ನುವುದು ಈಗ ಖಾತರಿಯಾಗಿದೆ” ಎಂದು ಬಿಜೆಪಿ ಮುಖಂಡ ರಜನೀಶ್ ಅಗರ್ವಾಲ್ ಹೇಳಿದ್ದಾರೆ.

- Advertisement -

ಮೂರು ದಿನಗಳ ಹಿಂದೆ ಚೌರಾಸಿಯಾರನ್ನು ತಮ್ಮ ಸಂಘಟನೆಯಿಂದ ಉಚ್ಛಾಟಿಸಿರುವುದಾಗಿ ಹಿಂದೂ ಮಹಾಸಭಾ ಹೇಳಿಕೆ ನೀಡಿದೆ.

2015ರ ಗ್ವಾಲಿಯರ್ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಚೌರಾಸಿಯಾ, 2017ರಲ್ಲಿ ಗೋಡ್ಸೆ ದೇವಾಲಯ ನಿರ್ಮಿಸಿದ್ದನು.  ಆಗ ಆತ ಹಿಂದೂ ಮಹಾಸಭಾದ ಸದಸ್ಯನಾಗಿದ್ದ. 2020ರ ಗೋಡ್ಸೆ ಬೆಂಬಲಿಸಿ ನಡೆದ ಕಾರ್ಯಕ್ರಮದಲ್ಲೂ ಆತ ಕಾಣಿಸಿಕೊಂಡಿದ್ದ.  

Join Whatsapp