ನ್ಯಾಯಾಂಗ ನಿಂದನೆಯ ಆರೋಪ | ಸುಪ್ರೀಂ ಕೋರ್ಟ್ ಕ್ಷಮೆ ಯಾಚಿಸಲು ನಿರಾಕರಿಸಿದ ಕುನಾಲ್ ಕಮ್ರಾ

Prasthutha|

ನವದೆಹಲಿ : ಸುಪ್ರೀಂ ಕೋರ್ಟ್ ವಿರುದ್ಧದ ಟೀಕೆಗಾಗಿ ನ್ಯಾಯಾಂಗ ನಿಂದನೆಯ ಆರೋಪ ಎದುರಿಸುತ್ತಿರುವ ಸ್ಟಾಂಡ್ ಅಪ್ ಹಾಸ್ಯಗಾರ ಕುನಾಲ್ ಕಮ್ರಾ, ತಾವು ತಮ್ಮ ಹೇಳಿಕೆಗಳಿಂದ ಹಿಂದೆ ಸರಿಯುವುದಿಲ್ಲ ಮತ್ತು ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ.

ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ತುರ್ತಾಗಿ ಜಾಮೀನು ನೀಡಿರುವುದಕ್ಕೆ ಕುನಾಲ್ ಸುಪ್ರೀಂ ಕೋರ್ಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ನಾನು ನನ್ನ ಟ್ವೀಟ್ ಹೇಳಿಕೆಗಳಿಂದ ಹಿಂದಕ್ಕೆ ಸರಿಯುವ ಉದ್ದೇಶ ಹೊಂದಿಲ್ಲ, ಅಥವಾ ಕ್ಷಮೆ ಯಾಚಿಸುವುದೂ ಇಲ್ಲ. ಅವರು ಅವರಿಗೋಸ್ಕರ ಮಾತನಾಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಕುನಾಲ್ ಹೇಳಿದ್ದಾರೆ.

“ನ್ಯಾಯವಾದಿಗಳು ಇಲ್ಲ, ಕ್ಷಮೆ ಇಲ್ಲ, ದಂಡ ಇಲ್ಲ, ಸ್ಥಳ ವ್ಯರ್ಥವೂ ಇಲ್ಲ” ಎಂದು ಕುನಾಲ್ ತಮ್ಮ ಈ ಕುರಿತ ಟ್ವೀಟ್ ಗೆ ಶೀರ್ಷಿಕೆ ನೀಡಿದ್ದಾರೆ.

- Advertisement -