ಬೆಂಗಳೂರು ಗಲಭೆ ಆರೋಪಿ ಸಂಪತ್ ರಾಜ್ ಬಂಧಿಸಲಾಗದಿರುವುದಕ್ಕೆ ಹೈಕೋರ್ಟ್ ತರಾಟೆ
Prasthutha: November 13, 2020

ಬೆಂಗಳೂರು : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗದಿರುವುದಕ್ಕೆ ಹೈಕೋರ್ಟ್ ಇಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಓರ್ವ ರಾಜಕಾರಣಿಯನ್ನು ಬಂಧಿಸಲು ಸಾಧ್ಯವಾಗದಿರುವುದಕ್ಕೆ ಆಶ್ಚರ್ಯಕರವಾಗಿದೆ. ಸಂಪತ್ ರಾಜ್ ಬಂಧನಕ್ಕೆ ತನಿಖಾಧಿಕಾರಿ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾ. ಅಭಯ್ ಶ್ರೀನಿವಾಸ್ ಒಕಾ ಹೇಳಿದ್ದಾರೆ.
ಗಲಭೆ ಆರೋಪಿ ಸಂಪತ್ ರಾಜ್ ಕೊರೊನ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಬಳಿಕ ಅಲ್ಲಿಂದಲೇ ಪರಾರಿಯಾಗಿದ್ದರು. ಸಂಪತ್ ರಾಜ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದ್ದು, ಶರಣಾಗುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಸೂಚನೆ ನೀಡಿದ್ದಾರೆ.
