ಪಂಜಾಬ್ ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ: ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಬಳಿಕ ಅಕಾಲಿದಳ ಮುಖ್ಯಸ್ಥ ಘೋಷಣೆ

Prasthutha|

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ ಬೆನ್ನಲ್ಲೇ, ಪಂಜಾಬ್ ನಲ್ಲಿ ಮುಂದಿನ ವರ್ಷ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಯಾವುದೇ ರೀತಿಯಲ್ಲಿ ಮೈತ್ರಿ ನಡೆಸಲು ಸಾಧ್ಯವಿಲ್ಲ ಎಂದು ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಘೋಷಿಸಿದ್ದಾರೆ.

- Advertisement -

ಕಳೆದ ವರ್ಷ ಕೇಂದ್ರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎನ್.ಡಿ.ಎ ಒಕ್ಕೂಟದಿಂದ ಶಿರೋಮಣಿ ಅಕಾಲಿದಳ ಹೊರಬಂದಿತ್ತು. ಹರ್ಸಿಮ್ರತ್ ಕೌರ್ ಬಾದಲ್ ಅವರೊಂದಿಗಿನ ಪಕ್ಷಕ್ಕಿರುವ ಭಿನ್ನಾಭಿಪ್ರಾಯದಿಂದಾಗಿ ಆಡಳಿತಾರೂಢ ಬಿಜೆಪಿಯೊಂದಿಗಿನ ಮೈತ್ರಿಗೆ ಬ್ರೇಕ್ ನೀಡಿತ್ತು.

ಪ್ರಧಾನಿ ಶುಕ್ರವಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದೆಂದು ಘೋಷಿಸಿದ ಬಳಿಕ, ಬಿಜೆಪಿಯೊಂದಿಗೆ ಮೈತ್ರಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಯಾವುದೇ ಯೋಚನೆ ಪಕ್ಷದ ಮುಂದಿಲ್ಲ ಎಂದು ತಿಳಿಸಿದರು.



Join Whatsapp