ಸರ್ಟಿಫಿಕೇಟ್ ಅಗತ್ಯವಿಲ್ಲ, ಕುಡುಕರು ಸುಳ್ಳು ಹೇಳುವುದಿಲ್ಲವೆಂದ ಅಬಕಾರಿ ಅಧಿಕಾರಿ !

Prasthutha|

ಮಧ್ಯಪ್ರದೇಶ: ‘ವ್ಯಾಕ್ಸಿನ್ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ. ವ್ಯಾಕ್ಸಿನ್ ಪಡೆದಿದ್ದೇವೆ ಎಂದು ಬಾಯಲ್ಲಿ ಹೇಳಿದರಷ್ಟೇ ಸಾಕು, ಕುಡುಕರು ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಮಧ್ಯಪ್ರದೇಶದ ಅಬಕಾರಿ ಅಧಿಕಾರಿಯ ಹೇಳಿಕೆಯು ಇದೀಗ ಫುಲ್ ವೈರಲ್ ಆಗಿದೆ.

- Advertisement -


ಮಧ್ಯಪ್ರದೇಶದ ಕಂದ್ವಾ ಜಿಲ್ಲೆಯಲ್ಲಿ ಮದ್ಯ ಖರೀದಿಸಬೇಕಾದರೆ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿರಬೇಕು ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಈ ಕುರಿತು ಸ್ಪಷ್ಟನೆ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದ್ವಾ ಜಿಲ್ಲೆಯ ಅಬಕಾರಿ ಅಧಿಕಾರಿ ಆರ್.ಪಿ. ಕಿರಾರ್, ಮದ್ಯ ಖರೀದಿಸಲು ಬರುವವರು ಯಾವುದೇ ಸರ್ಟಿಫಿಕೇಟ್ ಹಾಜರು ಪಡಿಸುವ ಅವಶ್ಯಕತೆಯಿಲ್ಲ. ಮೌಖಿಕ ಭರವಸೆ ಅಂದರೆ ವ್ಯಾಕ್ಸಿನ್ ಪಡೆದಿದ್ದೇವೆ ಎಂದು ಬಾಯಲ್ಲಿ ಹೇಳಿದರಷ್ಟೇ ಸಾಕು, ಕುಡುಕರು ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದಾರೆ.


ಕಂದ್ವಾ ಜಿಲ್ಲೆಯಲ್ಲಿ ಮೆಗಾ ವ್ಯಾಕ್ಸಿನೇಷನ್ ಮೇಳ ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯಲು ಜಿಲ್ಲಾಡಳಿತ ಮನವಿ ಮಾಡಿದೆ. ದೇಶೀಯ ಮದ್ಯಗಳನ್ನು ಮಾರಾಟ ಮಾಡುವ 55 ಲಿಕ್ಕರ್ ಶಾಪ್ ಹಾಗೂ 19 ವಿದೇಶಿ ಮದ್ಯಗಳನ್ನು ಮಾರಾಟ ಮಾಡುವ 19 ಮದ್ಯದಂಗಡಿಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಈ ಎಲ್ಲಾ ಮದ್ಯದಂಗಡಿಗಳಿಗೂ ಜಿಲ್ಲಾಡಳಿತದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮದ್ಯ ಖರೀದಿಸಲು ಎರಡು ಡೋಸ್ ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಲಾಗಿದೆ

Join Whatsapp