RSS ಮುಖ್ಯಸ್ಥ ಮೋಹನ್ ಭಾಗವತ್ ರಿಂದ ಮಾಧ್ಯಮ ಪ್ರಮುಖರೊಂದಿಗೆ ಮಹತ್ವದ ಸಭೆ

Prasthutha|

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ-RSS ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ನೋಯ್ಡಾದಲ್ಲಿ ಮಾಧ್ಯಮದ ಪ್ರಮುಖರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದು, ದೇಶದೆಲ್ಲೆಡೆ ವ್ಯಾಪಕ ಚರ್ಚೆ ಗ್ರಾಸವಾಗಿದೆ.

- Advertisement -

ಈ ಸಭೆಯಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಆರೆಸ್ಸೆಸ್ ಪ್ರಾಂತೀಯ ಮುಖ್ಯಸ್ಥ ಸೂರ್ಯ ಪ್ರಕಾಶ್ ಟೋಂಕ್, ನ್ಯಾಷನಲ್ ಕಮ್ಯೂನಿಕೇಷನ್ ಮುಖ್ಯಸ್ಥ ರಾಮ್ ಲಾಲ್ ಮತ್ತು ಸುದ್ದಿ ವಾಹಿನಿಗಳ ಸಂಪಾದಕರು ಉಪಸ್ಥಿತರಿದ್ದರು.

ಮಾತ್ರವಲ್ಲ ಸುದರ್ಶನ್ ನ್ಯೂಸ್ ಸಂಪಾದಕ ಸುರೇಶ್ ಚವಾಂಕೆ, ಆಜ್ ತಕ್ ಕಾರ್ಯನಿರ್ವಾಹಕ ಸಂಪಾದಕ ಮತ್ತು ನಿರೂಪಕ ಸಯೀದ್ ಅನ್ಸಾರಿ, ನೆಟ್ ವರ್ಕ್ 18 ಗ್ರೂಪ್ ನ ಮ್ಯಾನೇಂಜಿಂಗ್ ಎಡಿಟರ್ ಬ್ರಿಜೇಶ್ ಕುಮಾರ್ ಸಿಂಗ್, ಎಬಿಪಿ ನ್ಯೂಸ್ ನ ಉಪಾಧ್ಯಕ್ಷ ಸುಮಿತ್ ಅವಸ್ಥಿ, ಎಬಿಪಿ ನ್ಯೂಸ್ ಆಂಕರ್ ವಿಕಾಸ್ ಭದೌರಿಯಾ, ಇಂಡಿಯಾ ಟುಡೇ ಹಿರಿಯ ಸಂಪಾದಕ, ನಿರೂಪಕ ಗೌರವ್ ಸಾವಂತ್, ನ್ಯೂಸ್ 24 ಸಂಪಾದಕ ಅನುರಾಧ ಪ್ರಸಾದ್, ಇಂಡಿಯಾ ಟುಡೆ ಗ್ರೂಪ್ ಸುದ್ದಿ ನಿರ್ದೇಶಕಿ ಸುಪ್ರಿಯಾ ಪ್ರಸಾದ್ ಮತ್ತು ಟೈಮ್ಸ್ ನೆಟ್ ವರ್ಕ್ ಸಮೂಹ ಸಂಪಾದಕ ನಾವಿಕ್ ಕುಮಾರ್ ಸೇರಿದಂತೆ ಮಾಧ್ಯಮ ಸಂವಾದಲ್ಲಿ ಭಾಗವಹಿಸಿದವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಸಭೆಯಲ್ಲಿ ಭಾಗವಹಿಸಿದ ಪತ್ರಕರ್ತರಲ್ಲಿ ಕಲವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮತ್ತೆ ಕೆಲವರು ಕರೆಗಳನ್ನು ಸ್ವೀಕರಿಸಿರಲಿಲ್ಲ. ಈ ಕುರಿತು ಸುಪ್ರಿಯಾ ಪ್ರಸಾದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, ಆರೆಸ್ಸೆಸ್ ಬಗ್ಗೆ ಸಾಮಾನ್ಯ ರೀತಿಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಮಧ್ಯೆ ಎಬಿಪಿ ನ್ಯೂಸ್ ನ ವಿಕಾಸ್ ಭದೌರಿಯಾ ಅವರು ಪ್ರತಿಕ್ರಿಯಿಸುತ್ತಾ, ಇದೊಂದು ಸಾಮಾನ್ಯ ಸಭೆಯಾಗಿತ್ತು. ಮಾತುಕತೆ ನಡೆಸುವಂತಹ ಯಾವುದೇ ಅಜೆಂಡಾ ಇರಲಿಲ್ಲ. ವರ್ಷಕ್ಕೊಮ್ಮೆ ಮೋಹನ್ ಭಾಗವತ್ ಮಾಧ್ಯಮದವರೊಂದಿಗೆ ಸಂವಾದ ನಡೆಸುತ್ತಾರೆ. ಇದರಿಂದ ಜನರು ಆರೆಸ್ಸೆಸ್ ಅನ್ನು ಹತ್ತಿರದಿಂದ ಅರ್ಥೈಸಬಹುದೆಂದು ತಿಳಿಸಿದರು.

Join Whatsapp