ಭಾರತಕ್ಕೆ ಗಡೀಪಾರು ಆದೇಶ | ಮೇಲ್ಮನವಿ ಸಲ್ಲಿಸಲು ಲಂಡನ್ ಹೈಕೋರ್ಟ್‌ಗೆ ನೀರವ್ ಮೋದಿ ಮೊರೆ

Prasthutha|

ಲಂಡನ್:  ಬಹುಕೋಟಿ ರೂಪಾಯಿ ವಂಚಿನೆ ಮಾಡಿ ಭಾರತದಿಂದ ಪರಾರಿಯಾಗಿದ್ದ ನೀರವ್ ಮೋದಿ, ಗಡೀಪಾರಿಗೆ ಲಂಡನ್ ನ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ಅಲ್ಲಿನ ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಜ್ರೋದ್ಯಮಿ ನೀರವ್ ಮೋದಿಯನ್ನು ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿ ಭಾರತಕ್ಕೆ ಗಡೀಪಾರು ಮಾಡಲು ಆದೇಶಿಸಿತ್ತು.

- Advertisement -

ಕಳೆದ ಏಪ್ರಿಲ್ 16ರಂದು ಇಂಗ್ಲೆಂಡ್ ಸರ್ಕಾರದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ನೀರವ್ ಮೋದಿಯ ಗಡೀಪಾರಿಗೆ ಸಹಿ ಹಾಕಿದ್ದರು.

ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರದ 570 ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡಿಗೆ ಪರಾರಿಯಾದ ಆರೋಪದಲ್ಲಿ ನೀರವ್ ಮೋದಿ ಪ್ರಮುಖ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿ ಭಾರತಕ್ಕೆ ಗಡೀಪಾರು ಮಾಡಲು ಆದೇಶಿಸಿತ್ತು.

ಭಾರತದಿಂದ ಪರಾರಿಯಾಗಿದ್ದ ನೀರವ್ ಮೋದಿ 2019ರ ಮಾರ್ಚ್ 19ರಂದು ಲಂಡನ್ ನಲ್ಲಿ ಬಂಧಿತನಾಗಿದ್ದು, ನಂತರ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತವಾಗತ್ತು. ಸದ್ಯ ನೀರವ್ ಮೋದಿ ಲಂಡನ್ ನ ವಂಡ್ಸ್ ವರ್ತ್ ಜೈಲಿನಲ್ಲಿದ್ದಾರೆ.

- Advertisement -