ದೆಹಲಿಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ

Prasthutha|

ನವದೆಹಲಿ: ಕೋವಿಡ್-19ರ ಪ್ರಕರಣಗಳ ಹೆಚ್ಚಳ ಮತ್ತು ಓಮಿಕ್ರಾನ್ ಒಡ್ಡಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಡಿಡಿಎಂಎಯ ಆದೇಶದ ಮೇರೆಗೆ ದೆಹಲಿಯಲ್ಲಿ ವಿನಾಯಿತಿ ಪಡೆದ ವರ್ಗಗಳನ್ನು ಹೊರತುಪಡಿಸಿ ಇತರರ ಚಲನವಲನ ನಿರ್ಬಂಧಿಸಿ ಇಂದಿನಿಂದ ನೈಟ್‍ಕರ್ಫ್ಯೂ ವಿಧಿಸಲಾಗಿದೆ.

- Advertisement -

ಮುಂದಿನ ಆದೇಶದವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ದೆಹಲಿ ವಿಪತ್ತು (ವಿಕೋಪ) ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಗರ್ಭಿಣಿಯರು ಮತ್ತು ರೋಗಿಗಳು, ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡು ಹೋಗುವ ವ್ಯಕ್ತಿಗಳು, ಮಾಧ್ಯಮ ಪ್ರತಿನಿಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ವಾಪಸಾಗುವ ವ್ಯಕ್ತಿಗಳಿಗೆ ಕರ್ಫ್ಯೂ ವಿನಾಯಿತಿ ನೀಡಲಾಗಿದೆ.

ರಾತ್ರಿ ಕರ್ಫ್ಯೂ ವೇಳೆಯಲ್ಲಿ ವಿನಾಯಿತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಮೆಟ್ರೋ ರೈಲುಗಳು, ಸಾರ್ವಜನಿಕ ಸಾರಿಗೆ ಬಸ್ ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವೇಶಾವಕಾಶ ಇರಲಿದೆ ಎಂದು ಡಿಡಿಎಂಎ ಆದೇಶದಲ್ಲಿ ತಿಳಿಸಲಾಗಿದೆ.



Join Whatsapp