ನೈಜೀರಿಯಾ: ಮಸೀದಿ ಮೇಲೆ ದಾಳಿ| ಇಮಾಮ್ ಸೇರಿ 12 ಮಂದಿಯ ಹತ್ಯೆ

Prasthutha|

ಬಂದೂಕುಧಾರಿಗಳು ಮಸೀದಿ ಮೇಲೆ ದಾಳಿ ನಡೆಸಿ ಇಮಾಮ್ ಸೇರಿದಂತೆ 12 ಮಂದಿಯನ್ನು ಹತ್ಯೆಗೈದು ಅನೇಕ ಜನರನ್ನು ಅಪಹರಣಗೈದ ಘಟನೆ ನೈಜೀರಿಯಾದಲ್ಲಿ ನಡೆದಿದೆ.

- Advertisement -

ನೈಜೀರಿಯಾದ ಕಟ್ಸಿನಾ ರಾಜ್ಯದ ಮೈಗಮ್ಜಿ ಗ್ರಾಮದ ಮಸೀದಿಯೊಂದರಲ್ಲಿ ಪ್ರಾರ್ಥನಾ ನಿರತರಾಗಿದ್ದವರ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಇಮಾಮ್ ಸೇರಿ 12 ಮಂದಿಯನ್ನು ಹತ್ಯೆಗೈದು ಹಲವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂದೂಕುಧಾರಿಗಳು ಮಸೀದಿಗೆ ಆಗಮಿಸಿ ಏಕಾ ಏಕಿ ಗುಂಡು ಹಾರಿಸಲು ಪ್ರಾರಂಭಿಸಿದರು. ರಾತ್ರಿ ಪ್ರಾರ್ಥನಾ ನಿರತ ಮಸೀದಿಯ ಇಮಾಮ್ ಸೇರಿ ಸುಮಾರು 12 ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ.  ಹಲವರನ್ನು ಅಪಹರಿಸಿ ಕರೆದುಕೊಂಡು ಹೋಗಿದ್ದಾರೆಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

Join Whatsapp