ಟಿಪ್ಪು ಸುಲ್ತಾನ್ ಇಲ್ಲದ ಇತಿಹಾಸ ಅಪೂರ್ಣ: ಪತ್ರಕರ್ತ ಪಿ. ಸಾಯಿನಾಥ್

Prasthutha|

ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಹೊರತುಪಡಿಸಿ ಭಾರತೀಯರ ಇತಿಹಾಸ, ಸ್ವಾತಂತ್ರ್ಯ ಸಂಗ್ರಾಮವನ್ನು ನೆನೆಯಲು ಸಾಧ್ಯವೇ ಇಲ್ಲ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಹೇಳಿದ್ದಾರೆ.

- Advertisement -


ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ಮರಣೀಯ ಪಾತ್ರ ವಹಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಇಬ್ಬರು ಮಕ್ಕಳನ್ನು ಬಲಿದಾನ ಮಾಡಿ ಬ್ರಿಟಿಷರ ವಿರುದ್ಧ ನೇರವಾಗಿ ಹೋರಾಟ ನಡೆಸಿದ ಮೊದಲ ಅರಸ. ಅಂತಹ ಒಬ್ಬ ಮಹಾನ್ ನಾಯಕನನ್ನು ರಾಜಕೀಯ ಕಾರಣಗಳಿಗೆ ಕೈಬಿಟ್ಟು, ಇತಿಹಾಸ ನೆನೆಪು ಮಾಡಿಕೊಳ್ಳುವುದು ಅಸಾಧ್ಯ ಎಂದು ಹೇಳಿದರು.


ಸ್ವಾತಂತ್ರ್ಯದ 75 ನೇ ವರ್ಷದ ಅಂಗವಾಗಿ ಕೇಂದ್ರ ಸರಕಾರವು ಆಜಾದಿ ಕಾ ಅಮೃತ ಮಹೋತ್ಸವ ಎಂದು ವಿಶೇಷ ಕಾರ್ಯಕ್ರಮ ಘೋಷಿಸಿತು. ಆದರೆ, ವಿಪರ್ಯಾಸ ಎಂದರೆ, ಕೇಂದ್ರ ಸರಕಾರದ ಯಾವುದೇ ಅಧಿಕೃತ ವೆಬ್ ಸೈಟ್ ನಲ್ಲಿ ನೈಜ ಹೋರಾಟಗಾರರಿಗೆ ಗೌರವವೇ ನೀಡಿಲ್ಲ. ಕೇಂದ್ರ ಸರಕಾರವೇ ಸ್ವಾತಂತ್ರ್ಯ ಹೋರಾಟಗಾರರನ್ನು ಆಯ್ಕೆ ಮಾಡುವ ಸ್ಥಿತಿಗೆ ತಲುಪಿದೆ. ಅನೇಕ ಹೋರಾಟಗಾರರನ್ನು ಜನರು ಮರೆಯುವಂತೆ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು.

Join Whatsapp