ಪಿಎಫ್ ಐ ಗುರಿಯಾಗಿಸಿ ಎನ್ಐಎ ದಾಳಿ|ಇಂದು ಕೇರಳ ಬಂದ್

Prasthutha|

►ಹಲವೆಡೆ ಬಸ್ಸ್ ಗೆ ಕಲ್ಲು ತೂರಾಟ, ಟಯರ್ ಗಳಿಗೆ ಬೆಂಕಿ

ಕೇರಳ: ದೇಶಾದ್ಯಂತ ನಿನ್ನೆ ಏಕಕಾಲಕ್ಕೆ ಪಿಎಫ್ ಐ ಸಂಘಟನೆಯನ್ನು ಗುರಿಯಾಗಿಸಿ , ಪಿಎಫ್ ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, 100 ಕ್ಕೂ ಮಿಕ್ಕ ನಾಯಕರನ್ನು ವಶಕ್ಕೆ ಪದೆದುಕೊಂಡಿದೆ. ಈ ಎನ್ ಐಎ ನಡೆಸಿದ ದಾಳಿಯನ್ನು ಖಂಡಿಸಿ ಪಿಎಫ್ ಐ ಇಂದು (ಸೆಪ್ಟೆಂಬರ್ 23) ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ.

- Advertisement -

ಇಂದು ಕೇರಳದಲ್ಲಿ ಹರತಾಳ ನಡೆಯಲಿದ್ದು, ಎನ್ ಐ ಎ ದಾಳಿ, ಮುಖಂಡರ ಬಂಧನ ಪ್ರತಿಭಟಿಸಿ ಹರತಾಳ ಕ್ಕೆ ಕರೆ ನೀಡಿದೆ ಎಂದು ಪಾಪ್ಯುಲರ್ ಫ್ರಂಟ್ ತಿಳಿಸಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಹರತಾಳ ನಡೆಸಲು ನಿರ್ಧರಿಸಿದೆ.

ಹಲವೆಡೆ ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿರುವ ಹಾಗೂ ಕೆಲವೆಡೆ ಬಸ್ ಗಳಿಗೆ ಕಲ್ಲೆಸೆದ ಬಗ್ಗೆ ವರದಿಯಾಗಿದೆ.

- Advertisement -