ಪಾಕಿಸ್ತಾನದಿಂದ ಡ್ರೋನ್ ಗಳನ್ನು ಬಳಸಿ ಕಳ್ಳಸಾಗಣೆ ಮಾಡುತ್ತಿದ್ದ ಐವರು ವಿರುದ್ಧ ಎನ್ ಐಎ ಆರೋಪ

Prasthutha|

ನವದೆಹಲಿ: ಡ್ರೋನ್ ಗಳ ಮೂಲಕ ಗಡಿಯಾಚೆಗಿನ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಐವರು ಶಂಕಿತ ಖಲಿಸ್ತಾನಿ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.

- Advertisement -

ಆರೋಪಿಗಳು ಹರ್ಮೇಶ್ ಸಿಂಗ್, ದರ್ವೇಶ್ ಸಿಂಗ್, ಗುರುಮುಖ್ ಸಿಂಗ್, ಗಗನ್ ದೀಪ್ ಸಿಂಗ್ ಮತ್ತು ನಿಷೇಧಿತ ಸಂಘಟನೆ ಇಂಟರ್ ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್ ವೈಎಫ್) ಸಂಸ್ಥಾಪಕ ಲಖ್ಬೀರ್ ಸಿಂಗ್ ರೋಡ್ ಎಂದು ಗುರುತಿಸಲಾಗಿದೆ.  

2021 ರ ಆಗಸ್ಟ್ 25 ರಂದು ಪಂಜಾಬ್ ನ ಫಿರೋಜ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಕಳೆದ ವರ್ಷ ನವೆಂಬರ್ ನಲ್ಲಿ ಎನ್ ಐಎ ಈ ತನಿಖೆಯನ್ನು ವಹಿಸಿಕೊಂಡಿತ್ತು.

- Advertisement -

ಚಾರ್ಜ್ ಶೀಟ್ ಮಾಡಿದ ಆರೋಪಿಗಳು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಮಾದಕವಸ್ತುಗಳ ಅಕ್ರಮ ಸಾಗಣೆ ಮಾಡಿದ್ದಾರೆ ಏಜೆನ್ಸಿ ವರದಿ ಮಾಡಿದೆ.

“ಈ ಅಕ್ರಮ ಸರಕುಗಳನ್ನು ಆರೋಪಿ ಲಖ್ಬೀರ್ ಸಿಂಗ್ ರೋಡ್ (ಐಎಸ್ ವೈಎಫ್ ಮುಖ್ಯಸ್ಥ) ಮತ್ತು ಆತನ ಸಹಚರರು ಪಾಕಿಸ್ತಾನದಿಂದ ಡ್ರೋನ್ ಗಳ ಮೂಲಕ ಕಳುಹಿಸಿದ್ದಾರೆ” ಎಂದು ಸಂಸ್ಥೆ ಹೇಳಿದೆ.

ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು, ಲಖ್ಬೀರ್ ಸಿಂಗ್ ರೋಡ್ ತಲೆಮರೆಸಿಕೊಂಡಿದ್ದಾನೆ ಎಂದು ಎನ್ ಐಎ  ತಿಳಿಸಿದೆ.

Join Whatsapp