ಕಾಲೇಜ್’ನಿಂದ ಡಿಬಾರ್: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ !

Prasthutha|

ಬೆಂಗಳೂರು: ಕಾಲೇಜಿನಿಂದ ಡಿಬಾರ್ ಆದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಅಮರಜ್ಯೋತಿ ಲೇಔಟಿನಲ್ಲಿ ನಿನ್ನೆ ಸಂಜೆ ನಡೆದಿದೆ.

- Advertisement -

ಮುಳಬಾಗಿಲು ಮೂಲದ ಭವ್ಯಾ (19) ಮೃತಪಟ್ಟ ವಿದ್ಯಾರ್ಥಿನಿ.

 ತಾನು ವಾಸವಿದ್ದ ಖಾಸಗಿ ಪಿ.ಜಿ ಕಟ್ಟಡದ 5 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ನಿನ್ನೆಯಷ್ಟೇ ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು. ಇದರಿಂದಾಗಿ ಮನನೊಂದ ಭವ್ಯಾ ನಿನ್ನೆ ಸಂಜೆ ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ ‘ನನ್ನನ್ನ ಕಾಲೇಜ್ನಿಂದ ಡಿಬಾರ್ ಮಾಡಿದ್ದಾರೆ, ಹೀಗಾಗಿ ಬದುಕೋದಿಲ್ಲ’ ಎಂದು ಹೇಳಿದ್ದಾಳೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

- Advertisement -

 ನನ್ನ ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯವರೇ ಕಾರಣ ಎಂದು ಆರೋಪಿಸಿರುವ ಭವ್ಯಾ ಪೋಷಕರು, ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Join Whatsapp