ಜೀವನ ಮಟ್ಟ ಕುಸಿದು ಕುಳ್ಳರಾಗುತ್ತ ಸಾಗಿರುವ ಭಾರತೀಯರು

Prasthutha|

ಕುಟುಂಬ ಕಲ್ಯಾಣ ಇಲಾಖೆ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಂತೆ ಜಗತ್ತಿನಲ್ಲಿ ಒಟ್ಟಾರೆ ಎತ್ತರ ಏರುತ್ತಿದ್ದರೆ ಭಾರತೀಯರ ಎತ್ತರ ಕಡಿಮೆಯಾಗಿದೆ.

- Advertisement -

ಇದು ಅಪೌಷ್ಟಿಕತೆ ಮತ್ತು ಜೀವನ ಮಟ್ಟ ಕುಸಿತದ ನೇರ ಪರಿಣಾಮ ಆಗಿದೆ. ನೆಹರು ವಿವಿಯ ಕೃಷ್ಣಕುಮಾರ್ ಚೌಧರಿ, ಸಾಯನ್ ದಾಸ್, ಪ್ರಾಚೀನ್ ಕುಮಾರ್ ಗೋಡಜ್ ಈ ಎನ್‌ಎಚ್‌ಎಫ್‌ಎಸ್ ಸಮೀಕ್ಷೆ ನಡೆಸಿದ್ದು, ವರದಿಯಲ್ಲಿ ದೇಶದ ಜೀವನ ಮಟ್ಟ ಆತಂಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.

ಸರಾಸರಿಯಾಗಿ ದುರ್ಬಲ ವರ್ಗದ ಭಾರತೀಯರಲ್ಲಿ 0.42. ಸೆಂಟಿಮೀಟರ್ ಮತ್ತು ಕಡು ಬಡ ಕುಟುಂಬದ ಮಹಿಳೆಯರಲ್ಲಿ 0.63 ಸೆಂಟಿಮೀಟರ್ ಎತ್ತರ ತಗ್ಗಿದೆ. 1988ರಿಂದ 2015ರವರೆಗೆ ಮೂರು ಹಂತಗಳಲ್ಲಿ, ಮೂರು ವಯೋಮಾನದ ಗುಂಪಿನಡಿ ಈ ಸಮೀಕ್ಷೆ ನಡೆದಿದೆ.



Join Whatsapp