ನವದೆಹಲಿ : ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ವಿರುದ್ಧದ ಹೇಳಿಕೆಗೆ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಪತ್ರಕರ್ತ, ನ್ಯೂಸ್18 ಟಿವಿ ನಿರೂಪಕ ಅಮೀಶ್ ದೇವಗನ್ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾ. ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಸಂಜೀವ್ ಖನ್ನಾ ಅರ್ಜಿ ವಿಚಾರಣೆ ನಡೆಸಿ, ದೇವಗನ್ ವಿರುದ್ಧದ ಎಲ್ಲಾ ಎಫ್ ಐಆರ್ ಗಳನ್ನು ಒಂದುಗೂಡಿಸಿ, ಅವುಗಳನ್ನು ಅಜ್ಮೇರ್ ಗೆ ವರ್ಗಾಯಿಸಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದೇವಗನ್ ವಿರುದ್ಧ ಏಳು ಎಫ್ ಐಆರ್ ಗಳು ದಾಖಲಾಗಿದ್ದವು. ಜೂ.15ರಂದು ತನ್ನ ಪ್ರೈಮ್ ಶೋ ಕಾರ್ಯಕ್ರಮದಲ್ಲಿ ದೇವಗನ್ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಬಗ್ಗೆ ಆಕ್ಷೇಪಕಾರಿ ಹೇಳಿಕೆಯನ್ನು ನೀಡಿದ್ದರು.