ನಾಲ್ಕು ದಿನಗಳ ಹಿಂದಷ್ಟೆ ವಿವಾಹವಾಗಿದ್ದ ನವದಂಪತಿ ಅಪಘಾತದಲ್ಲಿ ಮೃತ್ಯು..!

Prasthutha|

ತಿರುವಳ್ಳೂರ್: ಅತ್ಯಂತ ದಾರುಣ ಘಟನೆಯೊಂದರಲ್ಲಿ ನಾಲ್ಕು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವಜೋಡಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕಡಂಬತ್ತೂರ್ ಎಂಬಲ್ಲಿ ನಡೆದಿದೆ.

- Advertisement -

ಮೆಡಿಕಲ್​ ರೆಪ್​ ಆಗಿ ಕೆಲಸ ಮಾಡುತ್ತಿದ್ದ ಮನೋಜ್​ ಕುಮಾರ್​ (31) ಮತ್ತು ವೈದ್ಯೆ ಕಾರ್ತಿಕಾ (30) ಮೃತ ದಂಪತಿ.

ಅಕ್ಟೋಬರ್​ 28ರಂದು ವಿವಾಹವಾಗಿದ್ದ ದಂಪತಿ, ಭಾನುವಾರ ಪತ್ನಿಯ ಸಂಬಂಧಿಕರ ಮನೆಗೆ ಹೋಗಿ ಅರಕ್ಕೊಣಮ್​ಗೆ ಹಿಂದಿರುಗುತ್ತಿದ್ದ ವೇಳೆ ಪೂನಮೆಲೀ-ಅರಕ್ಕೊಣಮ್​ ಹೆದ್ದಾರಿ ನಡುವಿನ ಕಡಂಬಥೂರ್​ ಸಮೀಪ ಭಾನುವಾರ ರಾತ್ರಿ ಅಪಘಾತ ಸಂಭವಿಸಿದೆ.
ವಿರುದ್ಧ ದಿಕ್ಕಿನಿಂದ ಬಂದ ಕಾಂಕ್ರಿಟ್​ ಮಿಕ್ಸರ್​ ಲಾರಿ ತಿರುವು ಪಡೆಯಲು ಯತ್ನಿಸಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ​ ಲಾರಿ ಕಾರಿನ ಮೇಲೆ ಬಿದ್ದಿದೆ.

- Advertisement -

ಮಿಕ್ಸರ್​ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತದೇಹ ಹೊರತೆಗೆಯಲು ಹಾಗೂ ಕ್ರೇನ್ ಬಳಸಿ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಐದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು
ಘಟನೆ ನಡೆಯುತ್ತಲೇ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಪ್ಪೇಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp