ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ, ಕ್ರಿಕೆಟ್’ಗೆ ಮರಳುತ್ತಿದ್ದೇನೆ: ಅಭಿಮಾನಿಗಳಿಗೆ ಯುವಿ ಗುಡ್’ನ್ಯೂಸ್ !

Prasthutha|

ನವದೆಹಲಿ : ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದೇನೆ ಎಂದು ಮಾಜಿ ಆಲ್’ರೌಂಡರ್ ಯುವರಾಜ್ ಸಿಂಗ್ ಘೋಷಿಸಿದ್ದಾರೆ. 39 ವರ್ಷದ ಯುವರಾಜ್ ಸಿಂಗ್ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್;ಗೂ ನಿವೃತ್ತಿ ಘೋಷಿಸಿದ್ದರು.

- Advertisement -


ಆದರೆ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿರುವುದಾಗಿ ಇನ್ಸ್ಟಾಗ್ರಾಂ ಪೋಸ್ಟ್’ನಲ್ಲಿ ತಿಳಿಸಿದ್ದಾರೆ. ‘ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮುಂದಿನ ಫೆಬ್ರವರಿಯಲ್ಲಿ ನಾನು ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದ. ನಿಜವಾದ ಅಭಿಮಾನಿಗಳು ನಮ್ಮ ತಂಡದ ಕಠಿಣ ಸಮಯದಲ್ಲೂ ಬೆಂಬಲವನ್ನು ಸೂಚಿಸುತ್ತಾರೆ’ ಎಂದು ಯುವಿ ಬರೆದುಕೊಂಡಿದ್ದಾರೆ.


ಟೀಮ್ ಇಂಡಿಯಾ 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ನಿಭಾಯಿಸಿದ್ದರು. 2011ರಲ್ಲಿ ಯುವಿ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ 2012ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದರು. ಆದರೆ ಹಿಂದಿನ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಯುವಿಯನ್ನ ತಂಡದಿಂದ ಕೈ ಬಿಡಲಾಗಿತ್ತು.
2019ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಕೆನಾಡದಲ್ಲಿ ನಡೆದ ಗ್ಲೋಬಲ್ ಟಿ-20 ಟೂರ್ನಿ ಹಾಗೂ ದುಬೈನಲ್ಲಿ ನಡೆದ ಟಿ-10 ಲೀಗ್’ನಲ್ಲಿ ಯುವರಾಜ್ ಸಿಂಗ್ ಆಡಿದ್ದರು. ಕಳೆದ ಮಾರ್ಚ್’ನಲ್ಲಿ ನಡೆದಿದ್ದ ರೋಡ್ ಸೇಫ್ಟಿ ಟೂರ್ನಿಯಲ್ಲಿ ಯುವಿ ಇಂಡಿಯಾ ಲೆಜೆಂಡ್ಸ್ ಪರವಾಗಿ ಆಡಿದ್ದರು.
2007ರಲ್ಲಿ ಇಂಗ್ಲೆಂಡ್’ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಎಸೆದ ಓವರ್’ನ ಎಲ್ಲಾ 6 ಎಸೆತಗಳನ್ನು ಸಿಕ್ಸರ್’ಗೆ ಅಟ್ಟಿದ್ದ ಯುವಿ ಅಪಾರ ಅಭಿಮಾನಿ ವೃಂದವನ್ನು ತನ್ನದಾಗಿಸಿಕೊಂಡಿದ್ದರು.

Join Whatsapp