ಮಂಗಳೂರು: ಅತ್ಯಾಧುನಿಕ ವಿನ್ಯಾಸದ ‘ಡಿಸೈನರ್ಸ್ ಸ್ಟುಡಿಯೋ’ ಇಂಟೀರಿಯರ್ ಸೊಲ್ಯೂಶನ್ ಲೋಕಾರ್ಪಣೆ

Prasthutha|

ಫಳ್ನೀರ್ ನಿಂದ ಪಂಪ್ವೆಲ್ ಗೆ ಶಿಫ್ಟ್; ಅದ್ಧೂರಿಯ ಶುಭಾರಂಭ

- Advertisement -

ಮಂಗಳೂರು: ಜಿಲ್ಲೆಯ ಮೊತ್ತ ಮೊದಲ ಅತ್ಯಾಧುನಿಕ ಇಂಟೀರಿಯರ್ ಡಿಸೈನ್ ಶೋ ರೂಂ ‘ಡಿಸೈನರ್ಸ್ ಸ್ಟುಡಿಯೋ ಇಂಟೀರಿಯರ್ ಸೊಲ್ಯೂಶನ್’ ನಗರದ ಪಂಪ್ವೆಲ್ ನಲ್ಲಿರುವ ಒನಿಕ್ಸ್ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು.

‘ಡಿಸೈನರ್ಸ್ ಸ್ಟುಡಿಯೋ’ ಶೋ ರೂಂ ಮಾಲಕರಾದ ನಝೀಲ್ ಮಲಿಕ್ ಅವರ ತಾಯಿ ಜಮೀಲ ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋ ರೂಂ ಉದ್ಘಾಟಿಸಿದರು.

- Advertisement -

ಈ ಸಂದರ್ಭ ನಝೀಲ್ ಮಲಿಕ್ ಅವರು ಮಾತನಾಡಿ, ಒಳಾಂಗಣ ಮತ್ತು ಹೊರಾಂಗಣಕ್ಕೆ ಪೂರಕವಾದ ಅದ್ಧೂರಿ ವಿನ್ಯಾಸದ ಸಾಮಾಗ್ರಿಗಳ ಮಳಿಗೆ ಇದಾಗಿದೆ. ಇಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಲ್ಲಾ ರೀತಿಯ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸದ ಸಾಮಗ್ರಿಗಳು ಒದಗಿಸಲಾಗುವುದು. ಇದು ದಕ್ಷಿಣ ಕನ್ನಡ ಜಿಲ್ಲೆಯ ಮೊತ್ತ ಮೊದಲ ಮಳಿಗೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲು ಮಂಗಳೂರಿನ ಫಳ್ನೀರ್ ನಲ್ಲಿ ಸಣ್ಣ ಮಳಿಗೆ ಇದ್ದು, ಇದೀಗ ಅತ್ಯಾಧುನಿಕ ಶೈಲಿಯಲ್ಲಿ ನಗರದ ಪಂಪ್‌ವೆಲ್ ಸಮೀಪ ಒನಿಕ್ಸ್ ಕಟ್ಟಡದಲ್ಲಿ ಮಳಿಗೆ ತೆರೆಯಲಾಗಿದೆ. ಇಲ್ಲಿ ಗ್ರಾಹಕರಿಗೆ ಹೊಂದಿಕೆಯಾಗುವ ದರದಲ್ಲಿ ವಿದೇಶೀ ಮಾದರಿಯ ವಿನ್ಯಾಸವೂ ಲಭ್ಯವಿದ್ದು, ಗ್ರಾಹಕರಿಗೆ ಮೆಚ್ಚುಗೆಯಾಗಲಿದೆ” ಎಂದು ಹೇಳಿದರು.

ಬೆಂಗಳೂರಿನ ಇಂಟೀಯರ್ ಡಿಸೈನರ್ ತಾನ ಕುನಲ್ ಮಾತನಾಡಿ, “ಮಂಗಳೂರಿನ ಜನತೆಯ ಕನಸಿನ ಮನೆಯನ್ನು ನನಸು ಮಾಡಲು ‘ಡಿಸೈನರ್ಸ್ ಸ್ಟುಡಿಯೋ’ದಿಂದ ಸಾಧ್ಯವಾಗಲಿದೆ. ವಸತಿ ಹಾಗೂ ವಾಣಿಜ್ಯ ಎರಡೂ ಬಗೆಯ ಕಟ್ಟಡಗಳಿಗೂ ಪೂರಕವಾದ ಡಿಸೈನ್ ಗಳು ಲಭ್ಯವಿದೆ. ಮಂಗಳೂರು ತುಂಬಾ ವೇಗವಾಗಿ ಬೆಳೆಯುತ್ತಿರುವುದರಿಂದ ಒಂದೇ ಶೋರೂಂ ನಲ್ಲಿ ಫ್ಲೋರಿಂಗ್, ಸೀಲಿಂಗ್, ಪ್ಯಾನೆಲ್, ವಾಲ್ ಪೇಪರ್, ಲ್ಯಾಮಿನೇಟ್ಸ್ ಮುಂತಾದ ನಿರ್ಮಾಣಗಳಿಗೆ ಪೂರಕವಾದ ಡಿಸೈನ್ ಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಸಂಸ್ಥೆಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ” ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಫರಾಝ್ ಹಾಗೂ ಸಾಹಿಲ್ ಝಹೀರ್ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭ ಸಿಗ್ನೇಚರ್ ಇಂಡಿಯ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಖಲೀಲ್ ಸುಲ್ತಾನ್, ಕ್ರೋಮ ಪ್ರೊಪಟೀಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಸ್ಲಂ, ಐ ಡ್ರೀಮ್ಸ್ ಇವೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ ಅಖ್ತರ್, ಗ್ಲೋಬಲ್ ಅಕಾಡೆಮಿ ನಿರ್ದೇಶಕರಾದ ಅಸ್ಪರ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp