ಖ್ಯಾತ ಮಳಯಾಲ ನಟ ಮೋಹನ್ ಲಾಲ್ ಗೆ ಇ.ಡಿ ಸಮನ್ಸ್

Prasthutha: May 14, 2022

ಕೊಚ್ಚಿ: ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಕೇರಳ ನಟ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಮನ್ಸ್ ನೀಡಿದೆ. ನಕಲಿ ಪುರಾತನ ವಸ್ತುಗಳ ವ್ಯಾಪಾರಿ ಮತ್ತು ವಂಚಕ ಮಾನ್ಸನ್ ಮಾವುಂಕಲ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸೂಪರ್‌ ಸ್ಟಾರ್‌ಗೆ ಸಮನ್ಸ್ ಬಂದಿದೆ.

ನಕಲಿ ಪುರಾತನ ವ್ಯಾಪಾರಿ ಮೊನ್ಸನ್ ಮಾವುಂಕಲ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮೋಹನ್ ಲಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಮೊನ್ಸನ್ ಮಾವುಂಕಲ್ ಒಬ್ಬ ಸ್ವಯಂ ಘೋಷಿತ ಪ್ರಾಚೀನ ಸಂಗ್ರಾಹಕ ಮತ್ತು ಯೂಟ್ಯೂಬರ್ ಆಗಿದ್ದು , ಆತ ಕೊಚ್ಚಿಯಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದನು, ಅದರಲ್ಲಿ ಅವನು ಯೇಸುವಿಗೆ ದ್ರೋಹವೆಸಗಿದ್ದಕ್ಕಾಗಿ ಜುದಾಸ್ ಪಡೆದ 30 ನಾಣ್ಯಗಳಲ್ಲಿ ಎರಡು, ಯೇಸು ಧರಿಸಿದ್ದ ಬಟ್ಟೆಯ ತುಂಡು, ಪ್ರವಾದಿ ಮುಹಮ್ಮದ್ ಬಳಸಿದ ಚಾಲೀಸ್, ಟಿಪ್ಪು ಸುಲ್ತಾನನ ಸಿಂಹಾಸನ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಅಪರೂಪದ ಪ್ರಾಚೀನ ವಸ್ತುಗಳ ಸಂಗ್ರಹವನ್ನು ಹೊಂದಿರುವುದಾಗಿ ಹೇಳಿಕೊಂಡ್ಡಿದ್ದನು ಅಲ್ಲದೆ ಅದರಲ್ಲಿ ಹೆಚ್ಚಿನವು ನಕಲಿ ಎಂದು ತಿಳಿದುಬಂದಿದೆ

10 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಮುಂದಿನ ವಾರ ಇಡಿ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮೋಹನ್ ಲಾಲ್ ಅವರಿಗೆ ತಿಳಿಸಲಾಗಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!