ಭಾರತೀಯ ಸೇನೆಗೆ ಮುಂದಿನ ವರ್ಷದಿಂದ ಹೊಸ ಸಮವಸ್ತ್ರ

Prasthutha: December 2, 2021

ಹೊಸದಿಲ್ಲಿ: ಸೇನೆ ತನ್ನ ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲಿದೆ ಎಂದು ವರದಿಯಾಗಿದೆ.

ಹವಾಮಾನದ ಏರಿಳಿತವನ್ನು ಎದುರಿಸಲು ಪೂರಕವಾದ ಮಣ್ಣು ಮತ್ತು ಹಸಿರು ಬಣ್ಣ ಮಿಶ್ರಣದ ಸಮವಸ್ತ್ರವನ್ನು ಸಿಬ್ಬಂದಿ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಲಾಗಿದೆ.

ಡಿಜಿಟಲ್ ಕಣ್ಗಾವಲಿಗೂ ಸುಲಭವಾಗಿ ನಿಲುಕದ, ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಈ ಸಮವಸ್ತ್ರವನ್ನು ಜ.15 ರಂದು ನಡೆಯುವ ಸೇನಾ ದಿನದ ಪಥಸಂಚಲನದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.


ವಿವಿಧ ದೇಶಗಳಲ್ಲಿನ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಸಮವಸ್ತ್ರ ಅಂತಿಮಗೊಳಿಸಲಾಗಿದೆ. ಇದು, ಹೆಚ್ಚು ಬಾಳಿಕೆ ಬರಲಿದ್ದು, ಬೇಸಿಗೆ ಮತ್ತು ಚಳಿಗಾಲ ಎರಡಕ್ಕೂ ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು
ಹೇಳಿದ್ದಾರೆ.
ಭಾರತ ನೌಕಾಪಡೆ ಕಳೆದ ವರ್ಷವಷ್ಟೇ ತನ್ನ ಸಿಬ್ಬಂದಿಗೆ ನೂತನ ಸಮವಸ್ತ್ರ ಪರಿಚಯಿಸಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!