ನಟಿ ಅಮೂಲ್ಯಾ ಗರ್ಭಿಣಿಯಾಗಿದ್ದು BTV ಗೆ ‘ಮೆಗಾ ಬ್ರೇಕಿಂಗ್’: ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್

Prasthutha|

►‘ಇಡೀ ರಾಜ್ಯಕ್ಕೆ ಶುಭ ಸುದ್ದಿ’ ಎಂದು ಅಪಹಾಸ್ಯಕ್ಕೊಳಗಾದ ವಾಹಿನಿ

- Advertisement -

ಬೆಂಗಳೂರು: ಕನ್ನಡದ ನಟಿ ಅಮೂಲ್ಯಾ ಅವರು ಗರ್ಭಿಣಿಯಾಗಿದ್ದು‘ಮೆಗಾ ಬ್ರೇಕಿಂಗ್’ ಎಂದು ಬಿಟಿವಿ ವರದಿ ಮಾಡಿದೆ.

ಅಮೂಲ್ಯಾ ಅವರು ಗರ್ಭಿಣಿ ಆಗಿರುವುದನ್ನು ‘ಇಡೀ ರಾಜ್ಯಕ್ಕೆ ಶುಭ ಸುದ್ದಿ’ ಸುದ್ದಿ ಎಂದು ಉಲ್ಲೇಖಿಸಿರುವ ಬಿಟಿವಿ, “ಉಲ್ಲಾಸದ ಹೂಮಳೆ ಸುರಿಸುವ ಖುಷಿಖುಷಿಯ ಸುದ್ದಿ, ಸ್ಯಾಂಡಲ್‌ವುಡ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್, ಇಡೀ ರಾಜ್ಯ ಖುಷಿ ಪಡುವ ಸುದ್ದಿ-ನಟಿ ಅಮೂಲ್ಯಾ ಪ್ರಗ್ನೆಂಟ್‌” ಎಂದು ಸ್ಕ್ರೀನ್‌ ನಲ್ಲಿ ಬರೆದು ವೀಕ್ಷಕರಿಗೆ ಸುದ್ದಿಯನ್ನು ತಿಳಿಸಿದೆ.

- Advertisement -


ಆದರೆ ಬಿಟಿವಿ ವಿರುದ್ದ ಸಾಮಾಜಿಕ ಜಾಲತಾಣದಕಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಟ್ರೋಲ್ ಕೂಡಾ ಮಾಡಲಾಗುತ್ತಿದೆ.

Join Whatsapp