ಎಣ್ಮೂರು: ನೂತನ ಶಾದಿ ಮಹಲ್ ಉದ್ಘಾಟನೆ, ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ರಮ

Prasthutha: December 6, 2021

ಸುಳ್ಯ: ತಾಲೂಕಿನ ಎಣ್ಮೂರು ಐವತ್ತೂಕ್ಲು ಕೇಂದ್ರ ರಹ್ಮಾನಿಯಾ ಜುಮಾ ಮಸ್ಜಿದ್ನ ಅಧೀನದಲ್ಲಿರುವ ನೂತನ ಶಾದಿ ಮಹಲ್ ಉದ್ಘಾಟನೆ ಹಾಗೂ ಮುಸ್ಲಿಂ ಯುವಜನ ಸಂಘ ಇದರ ಆಶ್ರಯದಲ್ಲಿ ಬಡ ಹೆಣ್ಮಕ್ಕಳ ವಿವಾಹ ಮತ್ತು ಶಂಶುಲ್ ಉಲಮಾ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಡಿ.5ರಂದು ನಡೆಯಿತು.


ನೂತನ ಶಾದಿ ಮಹಲ್ ಅನ್ನು ಓಲೆಮಂಡವು ಮಹಮೊದುಲ್ ಫೈಝಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ಜಿದ್ ನ ಗೌರವಾಧ್ಯಕ್ಷ ಹಾಜಿ ಕುಂಞಿಪಳ್ಳಿ ಐವತ್ತೂಕ್ಲು ವಹಿಸಿದ್ದರು.


ಈ ಸಂದರ್ಭ ಜುಮಾ ಮಸ್ಜಿದ್ನ ಅಧ್ಯಕ್ಷ ಇಸ್ಮಾಯೀಲ್ ಕೆ.ಎಂ.ಸ್ಥಳೀಯ ಖತೀಬ್ ಅಬ್ದುಲ್ಲ ಮದನಿ ರೆಂಜ, ಶಂಸುದ್ದೀನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಬಳಿಕ ನಡೆದ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂವೈಎಸ್ ಅಧ್ಯಕ್ಷ ಹಮೀದ್ ಮರಕ್ಕಡ ವಹಿಸಿದ್ದರು. ಕಜೆ ನಿಂತಿಕಲ್ಲು ಜುಮಾ ಮಸ್ಜಿದ್ ಖತೀಬ್ ಜಾಫರ್ ಸ ಅದಿ ಮುಖ್ಯ ಭಾಷಣ ಮಾಡಿದರು.


ಈ ಸಂದರ್ಭ ನವ ಸನದುದಾರಿಗಳನ್ನು ಸನ್ಮಾನಿಸಲಾಯಿತು. ಮುಸ್ತಫ ಸಅದಿ ಕೊಳ್ತಂಕರೆ ಸ್ವಾಗತಿಸಿದರು. ಎಂವೈಎಸ್ ಕಾರ್ಯದರ್ಶಿ ರಫೀಕ್ ಟಿ.ಎಸ್. ವಂದಿಸಿದರು. ಸಿ.ಎಂ.ರಫೀಕ್ ನಿರೂಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!