ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ನಿರ್ವಹಿಸದಂತೆ ಮಾಡಲು ಹೊಸ ನಿಯಮ ಜಾರಿ: ಡಾ.ಕೆ.ಸುಧಾಕರ್

Prasthutha|

ಬೆಳಗಾವಿ: ಸರ್ಕಾರಿ ವೈದ್ಯರು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಆಸ್ಪತ್ರೆಯಲ್ಲೇ ಇರಬೇಕು. ಈ ಸಂಬಂಧ ನೂತನ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.

- Advertisement -

ನಗರದಲ್ಲಿಂದು ಸುವರ್ಣಸೌಧದಲ್ಲಿ ಮೇಲ್ಮನೆಯ ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಕೆಲ ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಸಮಯದಲ್ಲೇ ಖಾಸಗಿ ಆಸ್ಪತ್ರೆಗೆ ಹೋಗಿ ಕಾರ್ಯನಿರ್ವಹಿಸುವ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಜೊತೆಗೆ ಹೊಸ ನೀತಿಯನ್ನೇ ರೂಪಿಸಲಾಗುವುದು ಎಂದರು.

ಅಲ್ಲದೆ, ವೈದ್ಯರು ಸರ್ಕಾರ ನಿಗದಿ ಮಾಡಿರುವ ಕೆಲಸ ಸಮಯದಲ್ಲಿ ಆಸ್ಪತ್ರೆಯಲ್ಲೇ ಇರಬೇಕು. ಇದಕ್ಕಾಗಿ ನೂತನ ತಂತ್ರಜ್ಞಾನ ವ್ಯವಸ್ಥೆಗೆ ಜಾರಿಗೆ ಮುಂದಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಆಗ ವೈದ್ಯರು ಎಲ್ಲಿ ಹೋದರೂ, ಎಂಬುವುದನ್ನು ಪತ್ತೆಹೆಚ್ಚಬಹುದಾಗಿದೆ ಎಂದು ವಿವರಿಸಿದರು.

- Advertisement -

ಪರಿಷತ್ತಿನ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಅವರು, ಬಹುತೇಕ ಸರ್ಕಾರಿ ವೈದ್ಯರು ತಮ್ಮ ಕುಟಂಬ ಸದಸ್ಯರ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡು, ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೂ, ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದಂತೆ ಇದ್ದು, ವೇತನ ಪಡೆಯುತ್ತಿದ್ದಾರೆ. ಆದರೆ, ನೈಜವಾಗಿ ಅವರು ಖಾಸಗಿ ಆಸ್ಪತ್ರೆಯಲ್ಲೇ ಹೆಚ್ಚು ಇರುತ್ತಾರೆ ಎಂದು ಸದನದ ಗಮನ ಸೆಳೆದರು.



Join Whatsapp