ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ದೇಶ ವಿಭಜನೆಯ ಕೆಲಸಕ್ಕೆ ಕೈಹಾಕಬೇಡಿ: ಕೆ.ಜೆ.ಜಾರ್ಜ್

Prasthutha|

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ದೇಶ ವಿಭಜನೆಯ ಕೆಲಸಕ್ಕೆ ಕೈಹಾಕಬೇಡಿ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದ್ದಾರೆ.

- Advertisement -

ನಗರದಲ್ಲಿಂದು ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗಿಷ್ಟ ಇರುವ ಧರ್ಮಕ್ಕೆ ಜನರು ಹೋಗಲು ಸಂವಿಧಾನವೇ ಅವಕಾಶ ಕಲ್ಪಿಸಿದೆ. ಬಲವಂತವಾಗಿ ಮತಾಂತರ ಆಗಲು ನಮ್ಮ ವಿರೋಧ ಇದೆ. ಅಲ್ಲದೆ, ಸಂವಿಧಾನದಲ್ಲಿ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.

ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಗಿಂತ ಕಡಿಮೆ ಇದೆ. ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ತರುವುದಕ್ಕೆ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಪಕ್ಷದವರಿಗೆ ಕಾಯ್ದೆ ತರದಂತೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ನುಡಿದರು.

- Advertisement -

ಈ ಕಾನೂನು ತರುವ ಮೂಲಕ ಕೆಲವರಿಗೆ ನೈತಿಕ ಪೊಲೀಸ್ ಗಿರಿಗೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಹಿಂದೂ ಧರ್ಮವಾಗಲಿ ಅಥವಾ ಬೇರೆ ಧರ್ಮವಾಗಲಿ ಶಕ್ತಿಯುಕ್ತವಾಗಿದೆ. ಅಷ್ಟೇ ಏಕೆ, ಮೊಗಲರು, ಡಚ್ಚರು, ಪೋರ್ಚುಗೀಸರು ಬಂದರೂ ಹಿಂದೂ ಧರ್ಮದ ಜನಸಂಖ್ಯೆ ಹೆಚ್ಚಿದೆ ಎಂದು ಅವರು ಪ್ರತಿಪಾದಿಸಿದರು.

Join Whatsapp